ಜಗಳ ಬಿಡಿಸಲು ಹೋದವನಿಗೆ ಚಾಕು ಇರಿತ: ಕೊಲೆ ಯತ್ನ ಪ್ರಕರಣ ದಾಖಲು

ಜಗಳ ಬಿಡಿಸಲು ಹೋದವನಿಗೆ ಚಾಕು ಇರಿತ: ಕೊಲೆ ಯತ್ನ ಪ್ರಕರಣ ದಾಖಲು

ಹುಬ್ಬಳ್ಳಿ: ಜಗಳ ಬಿಡಿಸಲು ಮುಂದಾದ ಯುವಕನ ತಲೆಗೆ ಕಲ್ಲಿನಿಂದ ಹೊಡೆದು, ಎಡ ತೊಡೆಗೆ ಚಾಕುವಿನಿಂದ ಚುಚ್ಚಿ ಗಾಯಪಡಿಸಿದ ಘಟನೆ ಇಲ್ಲಿನ ಹಳೇ ಹುಬ್ಬಳ್ಳಿ ಇಬ್ರಾಹಿಂಪುರ ರಸ್ತೆಯಲ್ಲಿ ತಡ ರಾತ್ರಿ ನಡೆದಿದೆ.

ಇಲ್ಲಿನ ಕಮಾನಗಾರ ಪ್ಲಾಟ್‌ನ ಹಸನ್ ಜುಬೇರ ಅಹ್ಮದ ನಾಯಕ (17) ಚಾಕು ಇರಿತಕ್ಕೀಡಾದವ, ಬಾಬಾ ಹುಸೇನ ಮುದಗಲ್, ಶಾಹಿನಶಾ ಸವಣೂರ ಆರೋಪಿಗಳು.

ಬಾಬಾ ಹುಸೇನ್ ಹಾಗೂ ಶಾಹಿನಶಾ ಮತ್ತಿತರರು ಜಗಳವಾಡುತ್ತಿದ್ದರು. ಇದನ್ನು ಗಮನಿಸಿದ ಹಸನ್ ಜಗಳ ಬಿಡಿಸಲು ಹೋಗಿದ್ದ. ನಮ್ಮ ಜಗಳ ಬಿಡಿಸಲು ನೀನು ಯಾರು' ಎಂದು ಶಾಹಿನಶಾ ಕಲ್ಲಿನಿಂದ ಹಸನ್ ತಲೆಗೆ ಹೊಡೆದ, ನಂತರ ಬಾಬಾ ಹುಸೇನ್ ಚಾಕುವಿನಿಂದ ಹಸನ್‌ನ ಎಡ ತೊಡೆಗೆ ಇರಿದು ಗಾಯಗೊಳಿಸಿದ ಎನ್ನಲಾಗಿದೆ. ಈ ಕುರಿತು ಕಸಬಾಪೇಟೆ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.