ಸಿಡಿಲು ಬಡಿದು ರೈತ ಸಾವು

ಸಿಡಿಲು ಬಡಿದು ರೈತನೋರ್ವ ಸಾವನ್ನಪ್ಪಿದ ಘಟನೆ ಧಾರವಾಡ ಜಿಲ್ಲೆಯಲ್ಲಿ ಜರುಗಿದೆ. ಅಣ್ಣಿಗೇರಿ ತಾಲೂಕಿನ ಸೈದಾಪುರ ಗ್ರಾಮದಲ್ಲಿ ಗುಡುಗು-ಮಿಂಚು ಸಹಿತ ಅತಿ ಮಳೆಯಾಗಿದ್ದರಿಂದ, ಸೈದಾಪುರ ಗ್ರಾಮದ ಸಂಗಪ್ಪ ತಂದೆ ಪಕೀರಪ್ಪ ವಾರದ ಎಂಬ 45 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾನೆ. ಸೋಮವಾರ ಸಂಜೆ 4:30 ಸುಮಾರಿಗೆ ಹೊಲದಿಂದ ಮನೆಗೆ ತೆರಳುವ ಸಮಯದಲ್ಲಿ ಸಿಡಿಲು ಬಡಿದಿದ್ದರಿಂದಾಗಿ ಸಾವನ್ನಪ್ಪಿದ್ದಾರೆ. ಅಣ್ಣಿಗೇರಿ ನಗರದ ಜನಸ್ನೇಹಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರೋ ಪಿಎಸ್ಐ ಲಾಲ್ ಸಾಹೇಬ್ ಜೂಲಕಟ್ಟಿ ಹಾಗೂ ಸಿಬ್ಬಂದಿ ತನಿಖೆಯನ್ನು ನಡೆಸಿದ್ದಾರೆ.