ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2021
ಜಗತ್ಪ್ರಸಿದ್ಧ ಮೈಸೂರು ಅರಮನೆ ಅಂಗಳದಲ್ಲಿ ಇಂದು ಸಹ ದಸರಾ ನಿಮಿತ್ತ ಕಾರ್ಯಕ್ರಮಗಳು ಮುಂದುವರಿದಿವೆ. ಇಂದು ಸಹ ಜಂಬೂಸವಾರಿ ರಿಹರ್ಸಲ್ ನಡೆಸಲಾಗಿದೆ. ಇದೇ 15ರಂದು ವಿಜಯದಶಮಿ ಜಂಬೂಸವಾರಿ ಮೆರವಣಿಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಗಜಪಡೆಯ ಕ್ಯಾಪ್ಟನ್ ಅಭಿಮನ್ಯುವಿಗೆ ಇಂದು ಸಹ ಮರದ ಅಂಬಾರಿ ಹೊರಿಸದೇ ರಿಹರ್ಸಲ್ ಮಾಡಲಾಗಿದೆ. ಇಂದು ನಡೆದ ರಿಹರ್ಸಲ್ ನಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಭಾಗಿಯಾಗಿದೆ.ಅರಮನೆ ಆವರಣದಲ್ಲಿ ಪುಷ್ಪಾರ್ಚನೆ ಮಾಡಲಾಗಿದೆ. ಪುಷ್ಪಾರ್ಚನೆಯ ಬಳಿಕ ಪೊಲೀಸ್ ಬ್ಯಾಂಡ್ ನಿಂದ ರಾಷ್ಟ್ರಗೀತೆ ಸಹ ನಡೆಯಿತು.ಅಭಿಮನ್ಯುವಿಗೆ ಕಾವೇರಿ ಮತ್ತು ಚೈತ್ರಾ ಕುಮ್ಕಿ ಆನೆಗಳು ಸಾಥ್ ನೀಡಿವೆ.ಅಶ್ವತ್ಥಾಮ, ಲಕ್ಷ್ಮಿ ಆನೆಗಳು ಸಹ ಮೆರವಣಿಗೆಯ ರಿಹರ್ಸಲ್ ನಲ್ಲಿ ಭಾಗಿಯಾಗಿದ್ದವು. ಅರಮನೆಯ ಖಾಸಗಿ ದರ್ಬಾರು ಪೂಜೆಯಲ್ಲಿ ಧನಂಜಯ, ಗೋಪಾಲಸ್ವಾಮಿ ಭಾಗಿಯಾಗಿದ್ದವು. ಹೀಗಾಗಿ ರಿಹರ್ಸಲ್ಗೆ ಗೈರು ಆಗಿದ್ದವು. ಮೆರವಣಿಗೆಯ ದೂರ ಹಾಗೂ ಸಮಯ ಪಾಲಿಸುವ ಸಲುವಾಗಿ ಇಂದು ರಿಹರ್ಸಲ್ ಮಾಡಲಾಗಿತ್ತು. ರಿಹರ್ಸಲ್ ನಲ್ಲಿ ಗಜಪಡೆಯ ಜೊತೆಗೆ ಅಶ್ವದಳವೂ ಭಾಗಿಯಾಗಿತ್ತು.ಪೊಲೀಸ್ ಬ್ಯಾಂಡ್ನಿಂದ ಸಂಗೀತದ ಜೊತೆಗೆ ಫಥಸಂಚಲನ ಸಹ ಮಾಡಲಾಯಿತು.ಇದೇ ವೇಳೆ ಸಶಸ್ತ್ರಧಾರಿ ಪೊಲೀಸರಿಂದಲೂ ಪಥಸಂಚಲನ ನಡೆಯಿತು.