ವಿಶ್ವ ಪತ್ರಿಕಾ ದಿನಾಚರಣೆ; ಸನ್ಮಾನ | Bangalore |
ವಿಶ್ವ ಪತ್ರಿಕಾ ದಿನಾಚರಣೆ ಅಂಗವಾಗಿ ಬೆಂಗಳೂರಿನಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದಿಂದ ಶಿಗ್ಗಾಂವಿ ತಾಲೂಕು ಪತ್ರಿಕಾ ವಿತರಕರ ಸಂಘದ ಅಧ್ಯಕ್ಷರು ಹಾಗೂ ಹಿರಿಯ ಏಜೆಂಟ್ ವೀರುಪಾಕ್ಷಪ್ಪ ನೀರಲಗಿ, ಉಪಾಧ್ಯಕ್ಷ ಶಿದ್ದರಾಮಗೌಡ ಮೇಳ್ಳಾಗಟ್ಟಿ, ಕಾರ್ಯದರ್ಶಿ ಸುರೇಶ ಯಲಿಗಾರ, ಅವರನ್ನು ವಸತಿ ಮತ್ತು ಮೂಲಸೌಕರ್ಯ ಸಚಿವ ವಿ.ಸೋಮಣ್ಣ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ಐಟಿ.ಬಿಟಿ.ಸಚಿವ ಸಿ.ಎನ್.ಅಶ್ವಥ್ ನಾರಾಯಣ, ಹಿರಿಯ ಸಂಪಾದಕ ವಿಶ್ವೇಶ್ವರ ಭಟ್, ಅಧ್ಯಕ್ಷರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಗೌರವ ಸಲಹೆಗಾರರು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಾನಂದ ತಗಡೂರ, ಅವರು ಸನ್ಮಾಸಿ ಗೌರವಿಸಿದರು. ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಅಧ್ಯಕ್ಷರು ಶಂಭುಲಿಂಗ. ಕೆ.ಉಪಾಧ್ಯಕ್ಷ ಪ್ರಶಾಂತಕುಮಾರ, ಪದಾಧಿಕಾರಿಗಳು ಉಪಸ್ಥಿತರಿದ್ದರು.