ಇವತ್ತೂ ಸಹ ರಾಜಧಾನಿಯಲ್ಲಿ ವರುಣನ ಅಬ್ಬರ, ಕರಾವಳಿ ಜಿಲ್ಲೆಗಳಲ್ಲಿ

ಉತ್ತರ ಕರ್ನಾಟಕದ ಬೀದರ್, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ, ಬಾಗಲಕೋಟೆ, ವಿಜಯಪುರ, ಕೊಪ್ಪಳ ಮತ್ತು ಗದಗ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವವಾಗಲಿದ್ದು, ಅಲ್ಲಲ್ಲಿ ತುಂತುರು ಮಳೆಯಾಗಲಿದೆ. ನವೆಂಬರ್ ನಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆ ರೈತರಿಗೆ ನಷ್ಟವನ್ನುಂಟು ಮಾಡುತ್ತಿದೆ.
ಹಾಸನ, ಮೈಸೂರು, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ದಾವಣಗೆರೆ, ಚಾಮರಾಜನಗರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.
ಬೆಂಗಳೂರಿನಲ್ಲಿ ಭಾರೀ ಮಳೆ
ಡಿಜೆ ಹಳ್ಳಿಯ ಕಾವಲ್ ಬೈರಸಂದ್ರ ಕಾವೇರಿನಗರ ಎ ಬ್ಲಾಕ್ ನಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಬಿಬಿಎಂಪಿ ಮತ್ತು ಬಿಡಬ್ಲೂ ಎಸ್ ಎಸ್ ಬಿ ಅಸಮರ್ಪಕ ಕಾಮಗಾರಿಯೇ ನೀರು ನುಗ್ಗಲು ಕಾರಣ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ . ಇನ್ನು ಬಸವನಗುಡಿಯಲ್ಲಿ ಶಾಸಕ ರವಿ ಸುಬ್ರಹ್ಮಣ್ಯ ಅವರ ಕಚೇರಿಗೂ ನೀರು ನುಗ್ಗಿದೆ.
ಮನೆಯೊಳಗೆ ನಾಲ್ಕು ಅಡಿಗಳಿಗೂ ಹೆಚ್ಚು ನೀರು ಸಂಗ್ರಹವಾಗಿದ್ದರಿಂದ, ಜನರು ರಾತ್ರಿ ಇಡೀ ನೀರು ಹೊರ ಹಾಕಲು ಪ್ರಯತ್ನಿಸುತ್ತಿದ್ದರು. ಇತ್ತ ನೆಲಮಂಗಲ ಮತ್ತು ಚಿಕ್ಕಬಾಣವಾರದಲ್ಲಿ ಸಂಜೆ ಮೂರು ಗಂಟೆ ಜೋರು ಮಳೆ ಸುರಿದ ಪರಿಣಾಮ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
ಅಕಾಲಿಕ ಮಳೆಗೆ ಬೆಳೆ ಹಾನಿ
ಕಳೆದ ಮೂರು ದಿನಗಳಿಂದ ಮೋಡ ಕವಿದ ವಾತವರಣ ಮತ್ತು ಆಗಾಗ ಸುರಿಯುತ್ತಿರೋ ಜಿನುಗುಅಕಾಲಿಕ ಮಳೆ ಮತ್ತು ತಂಪಾದ ವಾತವರಣದಿಂದ ಅನ್ನದಾತ ಕಂಗಾಲು ಆಗಿದ್ದಾನೆ. ಕುರುಗೋಡು ತಾಲೂಕಿನ ವಿವಿಧೆಡೆ ಬೆಳೆದ ಮೆಣಸಿನಕಾಯಿ ಬೆಳೆ ಸಂಪೂರ್ಣ ನಷ್ಟ ಅನುಭವಿಸಿದೆ.
ಕುರುಗೋಡು ಎಪಿಎಂಸಿ ಸೇರಿದಂತೆ ವಿವಿಧೆಡೆ ಒಣಗಿಸಲು ಕೆಂಪು ಮೆಣಸಿನಕಾಯಿ ಹಾಕಲಾಗಿತ್ತು. ಎಪಿಎಂಸಿ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಮೆಣಸಿನಕಾಯಿ ಹಾಳಾಗಿದೆ ಎಂದು ರೈತರ ಆರೋಪ ಮಾಡಿದ್ದಾರೆ.
ಜಲಪಾತಗಳಿಗೆ ಜೀವಕಳೆ
ಸತತವಾಗಿ ಸುರಿಯುತ್ತಿರುವ ಮಳೆಗೆ (Rain) ಬಯಲುಸೀಮೆ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರಗಳು ( Bengaluru, Bangalore Rural, Chikkaballapur, Kolar and Ramanagara) ಮಲೆನಾಡಿನಂತಾಗಿವೆ. ಕಲ್ಲುಬಂಡೆಗಳಿಂದ ಆವೃತ್ತವಾಗಿದ್ದ ಇಲ್ಲಿನ ಬೆಟ್ಟಗಳು ಉತ್ತಮ ಮಳೆಯ ಪರಿಣಾಮ ಹಸಿರಿನ ಕಾನನದಂತೆ ಕಾಣುತ್ತಿದೆ. ಜಲಧಾರೆಗಳಿಗೆ ಜೀವಕಳೆ ಬಂದಿದೆ. ಪ್ರವಾಸಿಗರಿಗೆ ಬಯಲುಸೀಮೆಯ ತಾಣಗಳ ಕೈಬೀಸಿ ಕರೆಯುತ್ತಿವೆ.
ನಂದಿಬೆಟ್ಟ, ಚನ್ನಗಿರಿ ಬೆಟ್ಟಗಳಲ್ಲಿ 5 ನದಿಗಳ ಉಗಮವಾಗುತ್ತವೆ. ನಂತರ ಮುಂದಿನ ಕೆರೆಗಳನ್ನು ತುಂಬಿಸಿಕೊಂಡು ಹರಿಯುತ್ತವೆ.ಈ ಬಾರಿ ಮಳೆಯಿಂದ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆರೆಗಳು ತುಂಬಿ ತುಳುಕುತ್ತಿವೆ.ಅನೇಕ ವರ್ಷಗಳಿಂದ ತುಂಬಿರದ ಕೆರೆಗಳು ಈ ಬಾರಿ ತುಂಬಿ ಕೋಡಿ ಹರಿದಿರುವ ಉದಾಹರಣೆಗಳು ಇದೆ.ಕೆರೆಗಳು ತುಂಬಿದರ ಪರಿಣಾಮವಾಗಿ ಪಕ್ಷಿಗಳು ಕೆರೆಗಳ ಕಡೆಗೆ ಧಾವಿಸುತ್ತಿದ್ದು ಕೆರೆಗಳು ಪಕ್ಷಿಧಾಮಗಳಂತೆ ಕಂಗೊಳಿಸುತ್ತಿವೆ.
ಕರ್ನಾಟಕದ ಡ್ಯಾಂಗಳು ಭರ್ತಿ
ರಾಜ್ಯದಲ್ಲಿ ಹಲವು ದಿನಗಳಿಂದ ನಿರಂತರವಾಗಿ ಮಳೆ (Rainfall) ಯಾಗುತ್ತಿದೆ. ಇಂದು ಸಹ ರಾಜ್ಯದ ಹಲವೆಡೆ ಮಳೆ ಮುಂದುವರಿಯುವ ನಿರೀಕ್ಷೆ ಇದೆ. ಭಾರಿ ಮಳೆಗೆ ರಾಜ್ಯದಲ್ಲಿ ನದಿಗಳ ನೀರಿನ ಪ್ರಮಾಣ ಹೆಚ್ಚುತ್ತಿದೆ. ಬಹುತೇಕ ಡ್ಯಾಂ (Karnataka dams)ಗಳು ಭರ್ತಿಯಾಗಿದ್ದು, ನದಿಗಳಿಗೆ ನೀರು ಬಿಡಲಾಗುತ್ತಿದೆ. ಈ ಹಿನ್ನೆಲೆ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.