"ಶ್ರೀರಾಮುಲು ಮಲಗಿದ್ದಾರೆ ಅಂದ್ರೆ ರಾಮರಾಜ್ಯದ ಪರಿಸ್ಥಿತಿ‌ ಏನೆಂದು ಅರ್ಥೈಸಿಕೊಳ್ಳಿ"

"ಶ್ರೀರಾಮುಲು ಮಲಗಿದ್ದಾರೆ ಅಂದ್ರೆ ರಾಮರಾಜ್ಯದ ಪರಿಸ್ಥಿತಿ‌ ಏನೆಂದು ಅರ್ಥೈಸಿಕೊಳ್ಳಿ"

ಬೆಂಗಳೂರು: ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಸಚಿವ ಶ್ರೀರಾಮುಲು ನದಿ ತೀರದಲ್ಲಿ ಮಲಗಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್,ರಾಮರಾಜ್ಯದ ಪರಿಸ್ಥಿತಿ‌ ಏನೆಂದು ಅರ್ಥೈಸಿಕೊಳ್ಳಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.ಅವರಿಗೆ ಧನ್ಯವಾದ.ಅವರು ಹೀಗೆ ಮಲಗಿಯೇ ಇರಲಿ ಎಂದರು.ಬಳ್ಳಾರಿಯ ಪಿಡಿ ಹಳ್ಳಿ ಬಳಿ ವೇದಾವತಿ ನದಿಗೆ ನಿರ್ಮಿಸಿರುವ ಸೇತುವೆ ಪಿಲ್ಲರ್ ದುರಸ್ತಿ ಹಿನ್ನೆಲೆ ಕಾಲುವೆಗೆ ನೀರು ಹರಿಯೋದು ಸ್ಥಗಿತಗೊಂಡಿತ್ತು. ಹೀಗಾಗಿ ಲಕ್ಷಾಂತರ ಎಕರೆ ಬೆಳೆ ಹಾನಿ ಆಗಿದೆ ಎಂದು ರೈತರು ಆಕ್ರೋಶಗೊಂಡಿದ್ದರು. ನಂತರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವ

ಅವರು, ಕಾಮಗಾರಿ ಪೂರ್ಣ ಮುಗಿಯೋವರೆಗೂ ಅಲ್ಲೇ ವಾಸ್ತವ್ಯಕ್ಕೆ ನಿರ್ಧರಿಸಿ ಅಲ್ಲಿಯೇ ರಾತ್ರಿ ಕಳೆದಿದರು. ಹೀಗಾಗಿ ಡಿಕೆ ವ್ಯಂಗ್ಯ ಮಾಡಿದರು.