ಇಸ್ಲಾಮಾಬಾದ್: ಜಾಫರ್ ಎಕ್ಸ್ ಪ್ರೆಸ್ ರೈಲಿನಲ್ಲಿ ಸ್ಫೋಟ, ಇಬ್ಬರು ಸಾವು

ಇಸ್ಲಾಮಾಬಾದ್: ಜಾಫರ್ ಎಕ್ಸ್ ಪ್ರೆಸ್ ರೈಲಿನಲ್ಲಿ ಸ್ಫೋಟ, ಇಬ್ಬರು ಸಾವು

ಸ್ಲಾಮಾಬಾದ್: ಕ್ವೆಟ್ಟಾಕ್ಕೆ ತೆರಳುತ್ತಿದ್ದ ಜಾಫರ್ ಎಕ್ಸ್ ಪ್ರೆಸ್ ರೈಲಿನಲ್ಲಿ ಗುರುವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಚಿಚಾವತ್ನಿ ರೈಲ್ವೆ ನಿಲ್ದಾಣದಿಂದ ಹಾದುಹೋಗುವ ಎಕ್ಸ್ ಪ್ರೆಸ್ ಬೋಗಿ ಸಂಖ್ಯೆ 6 ರಲ್ಲಿ ಸ್ಫೋಟ ಸಂಭವಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಗಾಯಗೊಂಡವರನ್ನು ತಹಸಿಲ್ ಪ್ರಧಾನ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಸಾಹಿವಾಲ್ ಜಿಲ್ಲಾ ಪೊಲೀಸ್ ಅಧಿಕಾರಿ (ಡಿಪಿಒ) ಫೈಸಲ್ ಶಹಜಾದ್ ಅವರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದೆ.