ನಾಳೆ ಬೆಂಗಳೂರಿಗೆ ಪ್ರಧಾನಿ ಮೋದಿ : " ಗುಂಡಿಗಳ ನಗರ ಬಿರುದು ನೀಡಲಿ" : ಡಿ.ಕೆ.ಶಿವಕುಮಾರ್ ಕಿಡಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ 'ಬೆಂಗಳೂರಿಗೆ ಗುಂಡಿಗಳ ನಗರ ಎಂದು ಬಿರುದು ನೀಡಿ ಹೋಗಲಿʼ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ಚಿತ್ರಕಲಾ ಪರಿಷತ್ತಿಗೆ ಭೇಟಿ ನೀಡಿದ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿ, ನಾಳೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಪ್ರಧಾನಿ ಸಂಚರಿಸುವ ರಸ್ತೆಗಳ ಗುಂಡಿಗಳನ್ನ ಮುಚ್ಚುವ ಕಾರ್ಯವನ್ನು ಮಾಡಲಾಗುತ್ತಿದೆ. ಬಸವರಾಜ್ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಗಳು ಇಲ್ಲಿನ ಜನರ ಹಿತವನ್ನು ನೆನಪಿಸಿಕೊಳ್ಳದೇ, ಈಗ ಪ್ರಧಾನಿ ಮೋದಿ ಬರ್ತಿದ್ದಾರೆ ಎಂದು ಗುಂಡಿ ಮುಚ್ಚಲು ಹೊರಟಿದ್ದಾರೆ ಕಿಡಿಕಾರಿದ್ದಾರೆ
ಪ್ರಧಾನಿ ಅವರು ಬೆಂಗಳೂರಿಗೆ ಒಂದು ಬಹುಮಾನ ಕೊಟ್ಟು ಹೋಗಲಿ. ಗುಂಡಿ ನಗರ ಅಂತಾದರೂ ಕರೆಯಲಿ ಅಥವಾ ಬೆಸ್ಟ್ ಸಿಟಿ ಎಂದಾದ್ರೂ ಕರೆಯಲಿ. ಅವರಿಗೆ ಏನು ಮಾಹಿತಿ ಇದೆಯೋ ಆ ರೀತಿ ಭ್ರಷ್ಟಾಚಾರದ ರಾಜಧಾನಿ ಅಂತನಾದರೂ ಕರೆಯಲಿ ಎಂದು ಡಿಕೆಶಿ ಟಾಂಗ್ ನೀಡಿದ್ದಾರೆ.