ನರೇಂದ್ರ ಗ್ರಾಮ ಪಂಚಾಯತಿಯಲ್ಲಿ ಪರಿಷತ್ ಮತದಾನ ಆರಂಭ. |Dharwad|
ಧಾರವಾಡ ತಾಲೂಕಿನ ನರೇಂದ್ರ ಗ್ರಾಮ ಪಂಚಾಯತಿ ಸಭಾಭವನದಲ್ಲಿ ಪರಿಷತ್ ಚುನಾವಣೆ ಮತದಾನಕ್ಕೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳೊಲಾಗಿದ್ದು, ಪಂಚಾಯತಿ ಸದಸ್ಯರ ಮತದಾನ ಆರಂಭವಾಗಿದೆ. ಗ್ರಾಮ ಪಂಚಾಯತಿ ಸಭಾಭನವದಲ್ಲಿ ಪಂಚಾಯತಿ ಸದಸ್ಯರಿಗೆ ಮತದಾನಕ್ಕೆ ಅವಕಾಶ ಮಾಡಿಕೊಲಾಗಿದ್ದು, ಈ ಹಿನ್ನೆಲೆಯಲ್ಲಿ ಈಗ ಪಂಚಾಯತಿ ಸದಸ್ಯರು ಒಬ್ಬೊಬ್ಬರಾಗಿ ಬಂದು ತಮ್ಮಸಂವಿಧಾನಿಕ ಮತದಾನದ ಹಕ್ಕನ್ನು ಚಲಾವಣೆ ಮಾಡುತ್ತಿದ್ದಾರೆ. 25 ಸದಸ್ಯರನ್ನು ನರೇಂದ್ರ ಗ್ರಾಮ ಪಂಚಾಯತಿ ಹೊಂದಿದ್ದು, ಮುಂಜಾನೆ ಎಂಟೆಯಿಂದ ಸಂಜೆ ನಾಲ್ಕು ಗಂಟೆಯವರೆಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇನ್ನೂ ಯಾವುದೇ ರೀತಿ ಅಹಿತಕರ ಘಟನೆ ನಡೆಯದಂತೆ ಮತದಾನ ಕೇಂದ್ರ ಬಳಿಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತನ್ನು ಕೈಗೊಳ್ಳಲಾಗಿದೆ