ಪುನೀತ್ ಹಾಡಿದ ಹಿಂದಿ ಹಾಡು ವೈರಲ್
ಯುವರತ್ನ ಸಿನಿಮಾ ಶೂಟಿಂಗ್ ವೇಳೆಯಲ್ಲಿ ಪುನೀತ್ ಧಾರವಾಡ ಬಂದಾಗ ಹಾಡಿದ ಹಾಡು ಫುಲ್ ವೈರಲ್ ಆಗಿದೆ. ಧಾರವಾಡ ಹೊರವಲಯದ ನವಲೂರ ಬಳಿ ಇರುವ ಮಯೂರ ಹೋಟೆಲ್ ನಲ್ಲಿ ಪುನೀತ್ ರಾಜ್ ಕುಮಾರ್ ಹಾಡಿದ ಹಿಂದಿ ಹಾಡು ಇವಾಗ್ ಪುಲ್ ವೈರಲ್ ಆಗಿದೆ. ಹಿಂದಿ ಹಾಡು ಹಾಡಿ ಎಲ್ಲರನ್ನ ರಂಜಿಸಿದ್ದ ಅಪ್ಪು ಮೈ ತೋ ಶಾಯರ್ ನಹೀ ಎಂದು ಹಾಡಿದ್ದರು. ಪವರ್ ಸ್ಟಾರ್ ಪುನೀತ್ ಬಾಬಿ ಚಿತ್ರದ ಶೈಲೇಂದ್ರ ಸಿಂಗ್ ಹಾಡಿರುವ ಫೇಮಸ್ ಹಾಡನ್ನ ಹಾಡಿ ಎಲ್ಲರನ್ನ ರಂಜಿಸಿದ್ದರು.ಈಗಾ ಸದ್ಯ ಹಿಂದಿ ಹಾಡನ್ನ ಹಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.