ಜನ ಸಾಮಾನ್ಯರಿಗೆ ಭರ್ಜರಿ ಗುಡ್‌ ನ್ಯೂಸ್‌ : 2024ರವರೆಗೂ 'ಉಚಿತ ಆಹಾರ ವಿತರಣೆ ಘೋಷಣೆ'

ಜನ ಸಾಮಾನ್ಯರಿಗೆ ಭರ್ಜರಿ ಗುಡ್‌ ನ್ಯೂಸ್‌ : 2024ರವರೆಗೂ 'ಉಚಿತ ಆಹಾರ ವಿತರಣೆ ಘೋಷಣೆ'

ವದೆಹಲಿ: ಐದನೇ ಬಾರಿಗೆ ಕೇಂದ್ರ ವಿತ್ತಸಚಿವೆ ನಿರ್ಮಲ ಸೀತಾರಾಮನ್‌(Nirmala Sitharaman) ಅವರು ಇಂದು ಸಂಸತ್ತು ಭವನದಲ್ಲಿ 2023-2024 ನೇ ಸಾಲಿನ ಕೇಂದ್ರ ಬಜೆಟ್‌(Union Budget) ಅನ್ನು ಮಂಡನೆ ಮಾಡುತ್ತಿದ್ದಾರೆ.

ಇದೇ ವೇಳೆ ಬಜೆಟ್‌ ಮಂಡನೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತ, ಈ ಬಾರಿಯ ಬಜೆಟ್‌ನಲ್ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿ ಕೇಂದ್ರ ಸರ್ಕಾರ 80 ಕೋಟಿಗೂ ಹೆಚ್ಚು ಜನರಿಗೆ ಉಚಿತವಾಗಿ ಆಹಾರವಸ್ತುಗಳ ವಿತರಣೆಯ ಯೋಜನೆ ಇನ್ನೂ ಎರಡು ವರ್ಷ ಮುಂದುವರಿಯಲಿದೆಎಂದು ಕೇಂದ್ರ ವಿತ್ತಸಚಿವೆ ನಿರ್ಮಲ ಸೀತಾರಾಮನ್‌ ಘೋಷಣೆ ಮಾಡಿದ್ದಾರೆ. ಜನ ಸಾಮಾನ್ಯರಿಗೆ ಉಚಿತ ಆಹಾರ ವಿತರಣೆ ಯೋಜನೆ ಮೂಲಕ ಅನುಕೂಲವಾಗಲಿದೆ.

ಅಗ್ಗದ ಬೆಲೆಯಲ್ಲಿ ಅಕ್ಕಿ, ಗೋಧಿ, ಸಕ್ಕರೆ ಇತ್ಯಾದಿ ಅಗತ್ಯ ಆಹಾರವಸ್ತುಗಳನ್ನುಕೇಂದ್ರ ಸರ್ಕಾರ ನೀಡುತ್ತದೆ. ಕೋವಿಡ್ ವೇಳೆ ಈ ಉಚಿತ ಆಹಾರಧಾನ್ಯ ವಿತರಣೆ ಕೋಟ್ಯಂತರ ಜನರಿಗೆ ಅನುಕೂಲವಾಗಿತ್ತು. ಕೃಷಿ ಕ್ಷೇತ್ರದಲ್ಲಿ ಸ್ಟಾರ್ಟಪ್​ಗಳಿಗೆ ಉತ್ತೇಜನ ಕೊಡಲು ಸರ್ಕಾರ ಅಗ್ರಿಕಲ್ಚರ್ ಆಕ್ಸಲರೇಟರ್ ಫಂಡ್ ಅನ್ನು ಸ್ಥಾಪಿಸಿದೆ. ಇದರಿಂದ ಕೃಷಿ ಕ್ಷೇತ್ರದ ಸರಬರಾಜು ಸರಪಳಿ ಮತ್ತು ಜಾಲಕ್ಕೆ ಬಲ ಸಿಗುವ ನಿರೀಕ್ಷೆ ಇದೆ. ಭಾರತದಲ್ಲಿ ಮೊದಲಿಂದಲೂ ಇದ್ದ ಈ ಸಮಸ್ಯೆಗೆ ಇದು ಪರಿಹಾರ ಒದಗಿಸುವ ಸಾಧ್ಯತೆ ಇದೆ.

ಕೃಷಿಗೆ ಸಂಬಂಧಿಸಿದ ಸ್ಟಾರ್ಟ್ ಅಪ್ ಗಳಿಗೆ ಆದ್ಯತೆ ನೀಡಲಾಗುವುದು

'ನಮ್ಮ ಆರ್ಥಿಕ ಕಾರ್ಯಸೂಚಿಯು ನಾಗರಿಕರಿಗೆ ಅವಕಾಶಗಳನ್ನು ಸುಗಮಗೊಳಿಸುವುದು, ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯನ್ನು ವೇಗಗೊಳಿಸುವುದು ಮತ್ತು ಸ್ಥೂಲ ಆರ್ಥಿಕ ಸ್ಥಿರತೆಯನ್ನು ಬಲಪಡಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಕೃಷಿಗೆ ಸಂಬಂಧಿಸಿದ ಸ್ಟಾರ್ಟ್ ಅಪ್ ಗಳಿಗೆ ಆದ್ಯತೆ ನೀಡಲಾಗುವುದು. ಯುವ ಉದ್ಯಮಿಗಳು ಕೃಷಿ-ಸ್ಟಾರ್ಟ್ ಅಪ್ ಗಳನ್ನು ಪ್ರೋತ್ಸಾಹಿಸಲು ಕೃಷಿ ವೇಗವರ್ಧಕ ನಿಧಿಯನ್ನು ಸ್ಥಾಪಿಸಬೇಕು. ಭದ್ರಾ ಮೇಲ್ದೆಂಡೆ ಯೋಜನೆಗೆ 5,630 ಕೋಟಿ ರೂ. ಘೋಷಣೆ ಮಾಡಲಾಗಿದೆ.

ಉದ್ಯೋಗ ಸೃಷ್ಟಿಗೆ 10 ಲಕ್ಷ ಕೋಟಿ ರೂ. ಮೀಸಲಿಡಲಾಗುವುದು. ಜಿಡಿಪಿಯ ಶೇ. 3.3 ರಷ್ಟು ಉದ್ಯೋಗ ಸೃಷ್ಟಿಗೆ ಮೀಸಲಿಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.