ಎಪ್ರಿಲ್ 9: ಒಂದೇ ದಿನ ನರೇಂದ್ರ ಮೋದಿ-ರಾಹುಲ್ ಗಾಂಧಿ ಸದ್ದು

ರಾಜ್ಯ ವಿಧಾನಸಭೆ ಚುನಾವಣೆ ರಂಗು ಪಡೆದುಕೊಂಡಿದ್ದು, ರಾಷ್ಟ್ರೀಯ ನಾಯಕರ ರಾಜ್ಯ ಪ್ರವಾಸಕ್ಕೂ ದಿನಗಳು ನಿಕ್ಕಿಯಾಗಿವೆ. ಇದುವರೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎ.5ಕ್ಕೆ ಕೋಲಾರ ಪ್ರವಾಸ ಕೈಗೊಳ್ಳಲಿದ್ದಾರೆ ಎಂದೇ ಹೇಳಲಾಗುತ್ತಿತ್ತು. ಆದರೆ ದಿಢೀರನೇ ಅವರ ಪ್ರವಾಸ ದಿನ ಬದಲಾಗಿದೆ.
ಈಗಾಗಲೇ ಪ್ರಧಾನಿ ಮೋದಿಯವರು ಎ.9ರಂದು ರಾಜ್ಯ ಭೇಟಿ ನೀಡುವುದು ಖಚಿತವಾಗಿದೆ. ಮೈಸೂರಿಗೆ ಆಗಮಿಸುವ ಅವರು ಬಂಡೀಪುರ ಅರಣ್ಯಕ್ಕೆ ತೆರಳಿ ಹುಲಿ ಯೋಜನೆಯ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಆದರೆ ಅಂದು ರಾಜಕೀಯ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಖಚಿತವಾಗಿಲ್ಲ. ಈ ಮಧ್ಯೆ, ರಾಹುಲ್ ಅವರ ಎ.5ರ ಪ್ರವಾಸ ದಿಢೀರನೇ ಎ.9ಕ್ಕೆ ಮುಂದೂಡಿಕೆಯಾಗಿದ್ದು ಏಕೆ ಎಂಬುದರ ಬಗ್ಗೆ ಚರ್ಚೆಗಳು ಆರಂಭವಾಗಿವೆ.