ಬೆಳಗಾವಿ ವರಧಿ ನೆಗೆಟಿವ್ ಜೊತೆಗೆ ವ್ಯಾಕ್ಸೀನ್ ರಿಪೋರ್ಟ್ ಇದ್ರೆ ಮಾತ್ರ ಗಡಿ ಪ್ರವೇಶಕ್ಕೆ ಅವಕಾಶ…!!!
ಬೆಳಗಾವಿ- ಮಹಾಮಾರಿ ಕೊರೋನಾ ಸೊಂಕಿನ ಮೂರನೆಯ ಅಲೆಯ ಹೊಸ್ತಿಲಲ್ಲಿ ಬೆಳಗಾವಿ ಜಿಲ್ಲಾಡಳಿತ,ಗಂಭೀರವಾಗಿದೆ.ಮಹಾರಾಷ್ಟ್ರ,ಗೋವಾ ರಾಜ್ಯಗಳನ್ನು ಸಂಪರ್ಕಿಸುವ ಗಡಿಗಳಲ್ಲಿ ಕಠಿಣ ಕ್ರಮಗಳನ್ನು ಜರುಗಿಸುತ್ತಿದೆ.
ಬೆಳಗಾವಿ ಜಿಲ್ಲೆಯ ಮಹಾರಾಷ್ಟ್ರವನ್ನು ಸಂಪರ್ಕಿಸುವ ನಿಪ್ಪಾಣಿ ಬಳಿಯ ಕುಗನೋಳಿ ಚೆಕ್ ಪೋಸ್ಟ,ಕಾಗವಾಡ,ಅಥಣಿ,ಶಿನ್ನೋಳಿ ಚೆಕ್ ಪೋಸ್ಟ್ ಜೊತೆಗೆ ಗೋವಾ ರಾಜ್ಯವನ್ನು ಸಂಪರ್ಕಿಸುವ ರಸ್ತೆಗಳಲ್ಲಿ ,ಆರೋಗ್ಯ ಇಲಾಖೆ,ಆಶಾ ಕಾರ್ಯಕರ್ತೆಯರು,ಜೊತೆಗೆ ಪೋಲೀಸ್ ಸಿಬ್ಬಂಧಿಗಳು,ಮಹಾರಾಷ್ಟ್ರದಿಂದ ಕರ್ನಾಟಕದ ಗಡಿ ಪ್ರವೇಶ ಮಾಡುವ ಎಲ್ಲ ವಾಹನಗಳನ್ನು ತಡೆದು,ಪ್ರತಿಯೊಬ್ಬರ ಕೋವೀಡ್ ರಿಪೋರ್ಟ್ ಜೊತೆಗೆ,ವ್ಯಾಕ್ಸೀನ್ ಲಸಿಕೆ ಪಡೆದಿರುವ ರಿಪೋರ್ಟ್ ಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡುತ್ತಿದೆ.
ವ್ಯಾಕ್ಸೀನ್ ರಿಪೋರ್ಟ್,ಕೋವೀಡ್ ನೆಗೆಟಿವ್ ರಿಪೋರ್ಟ್ ಎರಡೂ ಇದ್ದರೆ ಮಾತ್ರ ಗಡಿ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದ್ದು,ರಿಪೋರ್ಟ್ ತೋರಿಸದಿದ್ದರೆ ಅಂತಹ ಪ್ರಯಾಣಿಕರನ್ನು ಮರಳಿ ಕಳಿಸಲಾಗುತ್ತಿದೆ.
ಬೆಳಗಾವಿ ಜಿಲ್ಲೆಯ ಶಿನ್ನೋಳಿ ಬಳಿಯ ಚೆಕ್ ಪೋಸ್ಟ್ ನಲ್ಲಿ ಒಬ್ಬರು ಆರೋಗ್ಯ ಇಲಾಖೆಯ ಸಿಬ್ಬಂಧಿ,ಓರ್ವ ಆಶಾ ಕಾರ್ಯಕರ್ತೆ ಮತ್ತು ಕೇವಲ ಒಬ್ಬರೇ ಪೋಲೀಸ್ ಸಿಬ್ಬಂಧಿ ಮಾತ್ರ ವಾಹನಗಳನ್ನು ತಪಾಸಣೆ ಮಾಡುತ್ತಿರುವದರಿಂದ,ಶಿನ್ನೋಳಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಕಾರ್ಯ,ಮಂದಗತಿಯಲ್ಲಿ ನಡೆಯುತ್ತಿದ್ದು ವಾಹನಗಳು ಸಾಲುಗಟ್ಟಿ ನಿಂತು ಟ್ರಾಫಿಕ್ ಜಾಮ್ ಆಗಿದೆ.
ನೆರೆಯ ಮಹಾರಾಷ್ಡ್ರದಲ್ಲಿ ಕೊರೋನಾ ಸೊಂಕಿನ ರೂಪಾಂತರ ಡೆಲ್ಟಾ ಪ್ಲಸ್ ಸೊಂಕು ವಿಪರೀತವಾಗಿದ್ದು,ಮಹಾರಾಷ್ಟ್ರದಿಂದ ಕರ್ನಾಟಕದ ಗಡಿ ಪ್ರವೇಶ ಮಾಡುವ ಪ್ರತಿಯೊಬ್ಬರನ್ನೂ ಕಡ್ಡಾಯವಾಗಿ ತಪಾಸಣೆ ಮಾಡಲಾಗುತ್ತಿದ್ದು,ಪ್ರತಿಯೊಂದು ಚೆಕ್ ಪೋಸ್ಟ್ ನಲ್ಲಿ ಕಟ್ಟು ನಿಟ್ಟಿನ ಕ್ರಮಗಳನ್ನು ಜರುಗಿಸಲಾಗಿದೆ.ಕೋವೀಡ್ ನೆಗೆಟಿವ್ ರಿಪೋರ್ಟ್ ತೋರಿಸದಿದ್ದರೆ ಗಡಿ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ.
ವರಧಿ : ವಿಶಾಲಕುಮಾರ್