ಸಂವಿಧಾನದ ಆಶಯಗಳಿಗೆ ಕೊಳ್ಳಿ ಇಟ್ಟಿದ್ದೆ ಕಾಂಗ್ರೆಸ್: ಟ್ಟಿಟ್ ಮಾಡಿ ಕುಟುಕಿದ ಬಿಜೆಪಿ
ಬೆಂಗಳೂರು: ಸಂವಿಧಾನದ ಆಶಯಗಳಿಗೆ ಕೊಳ್ಳಿ ಇಟ್ಟಿದ್ದೆ ಕಾಂಗ್ರೆಸ್ ಸದನದಲ್ಲಿ ಚರ್ಚೆ ಮಾಡದೆ 40 ಸೆಕೆಂಡ್‌ನಲ್ಲಿ ಇಂದಿರಾ ಗಾಂಧಿ ಕಾನೂನು ರೂಪಿಸಿದ್ದರು. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ತುರ್ತು ಪರಿಸ್ಥಿತಿ ಹೇರಿದ್ದು ಕಾಂಗ್ರೆಸ್.ಸಂವಿಧಾನ ರಚಿಸಿದ ಡಾ. ಅಂಬೇಡ್ಕರ್ ಅವರ ಆಶಯಕ್ಕೆ ವಿರುದ್ಧವಾಗಿ ದೇಶದಲ್ಲಿ ಎರಡೆರಡು ಧ್ವಜ ಹಾರಿಸಿದ್ದು ಕಾಂಗ್ರೆಸ್ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.