ಬಿಜೆಪಿಗೆ ಗುಡ್ ಬೈ ಹೇಳಿದ ಸಿ.ಟಿ ರವಿ ಆಪ್ತ ಹೆಚ್ ಡಿ ತಮ್ಮಯ್ಯ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಆಪ್ತರಲ್ಲಿ ಒಬ್ಬರಾಗಿ ಗುರ್ತಿಸಿಕೊಂಡಿದ್ದಂತ, ಬಿಜೆಪಿ ಮುಖಂಡ ಹೆಚ್ ಡಿ ತಮ್ಮಯ್ಯ ಅವರು, ಇಂದು ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ನನ್ನ ಸುದೀರ್ಘ 18 ವರ್ಷದ ರಾಜಕಾರಣದಲ್ಲಿ, ನಾನು ವಕ್ತಾರನಾಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ. ಈ ಸಂದರ್ಭದಲ್ಲಿ ಸಹಕಾರ ನೀಡಿದಂತ ನಮ್ಮ ಜಿಲ್ಲೆಯ ಎಲ್ಲ ಕಾರ್ಯಕರ್ತರಿಗೆ ಧನ್ಯವಾದಗಳನ್ನು ತಿಳಿಸಿದರು.
ಏಕಾಏಕಿ ಪಕ್ಷವನ್ನು ಬಿಡಬೇಕು ಅಂದರೇ ನೋವು ಉಂಟಾಗುತ್ತಿದೆ. ನಾನು ಮುಂದೆ ಏನೇ ತೀರ್ಮಾನ ಕೈಗೊಂಡರು ಅವರುಗಳ ಬಗ್ಗೆ ಗೌರವ ಪೂರ್ವಕವಾಗಿ ನಿರ್ಧಾರವನ್ನು ಕೈಗೊಳ್ಳಲಿದ್ದೇನೆ. ಆದರೂ ಅನಿವಾರ್ಯ ಕಾರಣದಿಂದ ಬಿಜೆಪಿ ಪಕ್ಷವನ್ನು ಬಿಡುತ್ತಿದ್ದೇನೆ ಎಂದು ಘೋಷಿಸಿದರು