ರಾಜ್ಯದಲ್ಲಿ ಮತ್ತೆ ಭುಗಿಲೇಳುತ್ತಾ ಹಿಜಾಬ್‌ ವಿವಾದ ?

ರಾಜ್ಯದಲ್ಲಿ ಮತ್ತೆ ಭುಗಿಲೇಳುತ್ತಾ ಹಿಜಾಬ್‌ ವಿವಾದ ?

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಎರಡ್ಮೂರು ತಿಂಗಳು ಬಾಕಿ ಇರುವ ಹಿನ್ನೆಲೆ ರಾಜ್ಯದಲ್ಲಿ ಉಂಟಾಗಿದ್ದ ಹಳೆ ಕೋಮು ಸಂಘರ್ಷಗಳು ನಿಧಾನವಾಗಿ ಮುನ್ನೆಲೆಗೆ ಬರುತ್ತಿವೆ. ಕಳೆದ ವರ್ಷ ದೇಶದಲ್ಲಿ ಸದ್ದು ಮಾಡಿದ್ದ ಹಿಜಾಬ್‌ ವಿವಾದ ಮತ್ತೆ ಭುಗಿಲೇಳುತ್ತಾ ಎಂಬ ಅನುಮಾನ ಮೂಡಿದೆ. ಇಂದು (ಜ.9) ಹಿಜಾಬ್‌‌‌‌‌‌‌ಗೆ ಸಂಬಂಧಪಟ್ಟ ವರದಿ ಬಿಡುಗಡೆ ಕಾರ್ಯಕ್ರಮಕ್ಕೆ ಪೀಪಲ್ಸ್‌‌‌‌ ಯೂನಿಯನ್‌‌ ಫಾರ್‌ ಸಿವಿಲ್‌‌ ಲಿಬರ್ಟಿಸ್‌‌‌‌ ತಯಾರಿ ನಡೆಸಿದ್ದು, ಸಂಜೆ ಆನ್‌‌ಲೈನ್‌ ಸುದ್ದಿಗೋಷ್ಠಿ ನಡೆಯಲಿದೆ.