ಮದ್ದೂರಿನಲ್ಲಿ ಹಾಡು ಹಗಲೇ ಮನೆಗೆ ನುಗ್ಗಿ ಅರ್ಧ ಕೆಜಿ ಚಿನ್ನಾಭರಣ ಲೂಟಿ!

ಮದ್ದೂರಿನಲ್ಲಿ ಹಾಡು ಹಗಲೇ ಮನೆಗೆ ನುಗ್ಗಿ ಅರ್ಧ ಕೆಜಿ ಚಿನ್ನಾಭರಣ ಲೂಟಿ!

ಮಂಡ್ಯ : ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ಸೋಮವಾರ ಸಂಜೆ ಮನೆಯ ಬೀಗ ಹೊಡೆದು ಕಳ್ಳರು ಲಕ್ಷಾಂತರ ರೂ.ಬೆಲೆ ಬಾಳುವ ಚಿನ್ನಾಭರಣ ಹಾಗೂ ಬೆಳ್ಳಿ ಸಾಮಾಗ್ರಿಗಳನ್ನು ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ.

ಸೋಮನಹಳ್ಳಿಯ ಗ್ರಾಮದ ಲೋಲಾಕ್ಷಿ ಎಂಬುವರ ಮನೆಯಲ್ಲಿ ಕಳ್ಳತನವಾಗಿದ್ದು, ಲೋಲಾಕ್ಷಿ ಅವರು ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಮದ್ದೂರು ಪಟ್ಟಣಕ್ಕೆ ತೆರಳಿದ್ದ ಸಮಯದಲ್ಲಿ ಮನೆಯ ಬೀಗ ಹೊಡೆದು ಬೀರುವಿನಲ್ಲಿದ್ದ ಅರ್ಧ ಕೆಜಿ 1/2 ಕೆಜಿ ಚಿನ್ನ ಹಾಗೂ ಒಂದು ಕೆಜಿ ಬೆಳ್ಳಿ ಸಾಮಾಗ್ರಿಗಳನ್ನು ( ಅಂದಾಜು 40 ಲಕ್ಷ ರೂ.

ಬೆಲೆಬಾಳುವ ) ಕದ್ದು ಪರಾರಿಯಾಗಿದ್ದಾರೆ.

ಬೆಂಗಳೂರು - ಮೈಸೂರು ಹೆದ್ದಾರಿ ಸಮೀಪವಿರುವ ಮನೆಯಲ್ಲಿ ಕಳ್ಳತನ ನಡೆದಿರುವುದು ಗ್ರಾಮಸ್ಥರಿಗೆ ಆತಂಕ ತಂದಿದೆ. ಲೋಲಾಕ್ಷಿ ಅವರು ಒಬ್ಬರೇ ವಾಸವಿದ್ದರು ಎನ್ನಲಾಗಿದೆ.

ಇನ್ನು ಘಟನಾ ಸ್ಥಳಕ್ಕೆ ಬೆರಳಚ್ಚು ತಂಡ ಹಾಗೂ ಶ್ವಾನದಳ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದು, ಮದ್ದೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ : ಗಿರೀಶ್ ರಾಜ್ ಮಂಡ್ಯ.