ಸ್ನೇಹಿತನನ್ನು ಕೊಂದು ಘಾಟ್‌ನಿಂದ ಎಸೆಯುವಾಗ ಕಾಲು ಜಾರಿ ಬಿದ್ದು ಆರೋಪಿ ಸಾವು

ಸ್ನೇಹಿತನನ್ನು ಕೊಂದು ಘಾಟ್‌ನಿಂದ ಎಸೆಯುವಾಗ ಕಾಲು ಜಾರಿ ಬಿದ್ದು ಆರೋಪಿ ಸಾವು

ಹಾರಾಷ್ಟ್ರ: ಹಣಕಾಸಿನ ವಿಚಾರಕ್ಕೆ ತನ್ನ ಸ್ನೇಹಿತನನ್ನು ಕೊಲೆ ಮಾಡಿದ 30 ವರ್ಷದ ವ್ಯಕ್ತಿಯೊಬ್ಬ ಶವವನ್ನು ಘಾಟ್‌ನಿಂದ ಎಸೆಯಲು ಹೋಗಿ ಕಾಲು ಜಾರಿ ತಾನೂ ಸಾವನ್ನಪ್ಪಿದ ವಿಪರ್ಯಾಸ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮೃತ ದೇಹವನ್ನು ಎಸೆಯಲು ವ್ಯಕ್ತಿಗೆ ಸಹಾಯ ಮಾಡುತ್ತಿದ್ದ ಸಹಾಯಕ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾನೆ.

ಕೊಲ್ಲಾಪುರದಿಂದ ಸಾವಂತವಾಡಿಯ ಅಂಬೋಲಿ ಘಾಟ್‌ನಲ್ಲಿ ಈ ಘಟನೆ ನಡೆದಿದೆ.

ಭೌಸೋ ಮಾನೆ ಎಂಬ 30 ವರ್ಷದ ವ್ಯಕ್ತಿ ಹಣಕಾಸಿನ ವಿಚಾರಕ್ಕೆ ತನ್ನ ಸ್ನೇಹಿತ ಸುಶಾಂತ್ ಖಿಲ್ಲರೆ (30) ಎಂಬಾತನನ್ನು ಭಾನುವಾರ ಕೊಂದಿದ್ದಾನೆ. ನಂತ್ರ, ಕೊಲೆ ಪ್ರಕರಣ ಮುಚ್ಚಿಹಾಕಲು ಅಂಬೋಲಿ ಘಾಟ್‌ನಲ್ಲಿ ಎಸೆಯಲು ಪ್ಲಾನ್‌ ಮಾಡಿದ್ದನು.

ಅದರಂತೇ, ಸುಶಾಂತ್ ಶವವನ್ನು ಎಸೆಯಲು ತುಷಾರ್ ಪವಾರ್ (28) ಎಂಬಾತನ ಜೊತೆ ಸೇರಿ ಕಾರಿನಲ್ಲಿ ಅಂಬೋಲಿ ಘಾಟ್‌ಗೆ 400 ಕಿಮೀ ಪ್ರಯಾಣಿಸಿದರು.

ಅಲ್ಲಿ ಸುಶಾಂತ್‌ನ ಮೃತದೇಹವನ್ನು ಎಸೆಯುವಾಗ ಭೌಸೋ ಕಾಲು ಜಾರಿ ಬಿದ್ದು ತಾನೂ ಸಾವನ್ನಪ್ಪಿದ್ದನೆ. ಆದ್ರೆ, ಪವಾರ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಮೂವರೂ ಸತಾರಾದ ಕರಡ್ ನಿವಾಸಿಗಳು.