ಫೇಸ್‌ಬುಕ್‌ನಲ್ಲಿ ಜಾಹೀರಾತು ನೋಡಿ ಜಾಬ್‌ಗೆ ಅಪ್ಲೈ ಮಾಡೋ ಮುನ್ನ ಈ ಸುದ್ದಿ ಓದಿ

ಫೇಸ್‌ಬುಕ್‌ನಲ್ಲಿ ಜಾಹೀರಾತು ನೋಡಿ ಜಾಬ್‌ಗೆ ಅಪ್ಲೈ ಮಾಡೋ ಮುನ್ನ ಈ ಸುದ್ದಿ ಓದಿ

ಬೆಂಗಳೂರು: ಫೇಸ್ ಬುಕ್ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದ ನಾಲ್ವರನ್ನು, ಬೆಂಗಳೂರಿನ ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಗೋಪಿಚಂದ್, ಗುಂಜ ಮಂಗರಾವ್, ಶೇಖ್ ಶಹಬಾಜಿ ಮತ್ತು ಮಹೇಶ್ ಅಂತ ಗುರುತಿಸಲಾಗಿದೆ.\

ಕಳೆದ ಜನವರಿ 11ಕ್ಕೆ ಪ್ರದೀಪ್ ಎಂಬ ವ್ಯಕ್ತಿಗೆ ಸಿಎಸ್‌ಎಸ್ ಕಾರ್ಪೊರೇಷನ್ ನಲ್ಲಿ ಇಂಟರ್ವ್ಯೂ ಇದೆ ಎಂದು ನಂಬಿಸಿ ಕರೆಸಿಕೊಂಡಿದ್ದರು. ಈ ವೇಳೇ ಹೈದರಾಬಾದ್‌ನ ಗಾಂಧಿನಗರದ ಮೂಲದ ನಿವಾಸಿಯಾಗಿರುವ ಪ್ರದೀಪ್ ಆಂಸರ್ ಹಲ್ಲೆಗೊಳಗಾಗಿದ್ದು, ಈತ ನೀಡಿದ ದೂರಿನ ಮೇರೆಗೆ ಯುವಕ ಕೊಡಿಗೇಹಳ್ಳಿ ಪೊಲೀಸರಿಗೆ ನೀಡಿದ ದೂರಿನ ಮೇರೆಗೆ ಇನ್ಸ್​ಸ್ಪೆಕ್ಟರ್ ಎನ್.ರಾಜಣ್ಣ ನೇತೃತ್ವದ ತಂಡ ಕಾರ್ಯಾಚರಣೆ ಮಾಡಿ ವಂಚಕರನ್ನು ಮಟ್ಟ ಹಾಕಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ತಿಳಿಸಿದರು.