'ಗಂಧದ ಗುಡಿ' ಚಿತ್ರ ವೀಕ್ಷಿಸಲು ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ 100 ಟಿಕೇಟ್ ನೀಡಿದ ಪ್ರಿಯಾ ಕೃಷ್ಣ
ಪವರ್ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ಕೊನೆಯ ಚಿತ್ರ ಗಂಧದ ಗುಡಿ ತೆರೆ ಮೇಲೆ ರಾರಾಜಿಸುತ್ತಿದೆ. ಎಲ್ಲೆಡೆ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಸಂದರ್ಭದಲ್ಲಿ ಸರ್ಕಾರಿ ಮಕ್ಕಳು ಸಿನಿಮಾ ವೀಕ್ಷಿಸಲು ಉಚಿತವಾಗಿ ಸುಮಾರು 100 ಟಿಕೆಟ್‌ಗಳನ್ನು ನೀಡಿದ್ದು ವಿದ್ಯಾರ್ಥಿಗಳು ಚಿತ್ರ ವೀಕ್ಷಿಸಿದ್ದಾರೆ.
ಗೋವಿಂದರಾಜನಗರದ ಮಾಜಿ ಎಂಎಲ್‌ಎ ಪ್ರಿಯಾ ಕೃಷ್ಣಸರ್ಕಾರಿ ಶಾಲೆ ಮಕ್ಕಳಿಗೆ ಗಂಧದ ಗುಡಿ ಸಿನಿಮಾ ವೀಕ್ಷಿಸಲು ನೆರವಾಗಿದ್ದಾರೆ. ಮಕ್ಕಳಿಗೆ ಅನುಕೂಲವಾಗಲೆಂದು ಸುಮಾರು 100 ಟಿಕೆಟ್‌ಗಳನ್ನು ಉಚಿತವಾಗಿ ಯುಗ ಎಂಬ ಎಂಜಿಓ ಮೂಲಕ ಈ ವ್ಯವಸ್ಥೆಯನ್ನು ಪ್ರಿಯಾ ಕೃಷ್ ಮಾಡಿದ್ದಾರೆ.
ಇಂದು ಬೆಳಗ್ಗೆ 10.30ಕ್ಕೆ ಮಾಗಡಿ ರಸ್ತೆಯಲ್ಲಿರುವ ಕಾಮಾಕ್ಷಿಪಾಳ್ಯದ ವಿಕ್ಟರಿ ಥಿಯೇಟರ್ ನಲ್ಲಿ 100 ಸರ್ಕಾರಿ ಶಾಲೆಯ ಮಕ್ಕಳು ಗಂಧದ ಗುಡಿ ಸಿನಿಮಾ ವೀಕ್ಷಿಸಿದ್ದಾರೆ.