ತೆಲುಗು ಚಿತ್ರದ ಪ್ರಚಾರದ ವೇಳೆ ಕನ್ನಡ ಸಿನೆಮಾಗಳ ಬಗ್ಗೆ ಹೆಮ್ಮೆಯಿಂದ ಮಾತನಾಡಿದ ಶ್ರೀಲೀಲಾ

ಸ್ಯಾಂಡಲ್ ವುಡ್ ನಟಿ ಶ್ರೀಲೀಲಾ ಈಗ ಕನ್ನಡ ಜೊತೆ ತೆಲುಗು ಚಿತ್ರರಂಗದಲ್ಲೂ ಅನೇಕ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇದೀಗ ರವಿತೇಜ ಜೊತೆಗೆ ಶ್ರೀಲೀಲಾ ನಟಿಸಿರುವ 'ಧಮಾಕಾ' ಸಿನಿಮಾವು ತೆರೆಗೆ ಬರುತ್ತಿದೆ. ಈ ವೇಳೆ ಕನ್ನಡ ಸಿನಿಮಾಗಳ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ. 'ಕಾಂತಾರ' ಚಿತ್ರದ ಬಗ್ಗೆ ಉತ್ತರಿಸಿದ ಶ್ರೀಲೀಲಾ, 'ಹೌದು, ನಾನು ಆ ಸಿನೆಮಾವನ್ನು ನೋಡಿದ್ದೇನೆ ಮತ್ತು ಅದ್ಭುತವಾಗಿದೆ. ನಾನು ಕರ್ನಾಟಕದಿಂದ ಬಂದವಳು. ಕನ್ನಡ ಚಿತ್ರರಂಗಕ್ಕೆ ತುಂಬ ದೊಡ್ಡ ಹೃದಯವಿದೆ' ಎಂದಿದ್ದಾರೆ.