ನಟ ದರ್ಶನ್ ಗೆ ಬಿಗ್ ಶಾಕ್: ತೋಟದ ಮನೆಯಿಂದ 4 ವನ್ಯ ಪಕ್ಷಿ ವಶ, ನಿಷೇಧಿತ ವನ್ಯ ಪಕ್ಷಿಗಳ ಸಾಕಣೆ ಪ್ರಕರಣ ದಾಖಲು

ಮೈಸೂರು: ಮೈಸೂರು ಅರಣ್ಯ ಸಂಚಾರಿದಳದ ಅಧಿಕಾರಿಗಳು ನಟ ದರ್ಶನ್ ಅವರ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿದ್ದು, ಈ ವೇಳೆ 4 ಬಾತುಕೋಳಿಗಳ ವಿಶಿಷ್ಟ ಪ್ರಭೇದದ ಜಲಪಕ್ಷಿಗಳನ್ನು (ಬಾರ್ ಹೆಡೆಡ್ ಗೂಸ್) ಅನ್ನು ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ.
ಕಳೆದ ರಾತ್ರಿ ಈ ದಾಳಿಯನ್ನು ಮಾಡಲಾಗಿದ್ದು, ಈ ವೇಳೆಯಲ್ಲಿ ಫಾರ್ಮ್ ಹೌಸ್‌ನಲ್ಲಿದ್ದ 4 ಬಾತುಕೋಳಿಗಳ ವಿಶಿಷ್ಟ ಪ್ರಭೇದದ ಜಲಪಕ್ಷಿಗಳನ್ನು (ಬಾರ್ ಹೆಡೆಡ್ ಗೂಸ್) ಅನ್ನು ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ. ಇವುಗಳನ್ನು ಎಲ್ಲಿ ಕೂಡ ಸಾಕುವುದು ವನ್ಯಜೀವಿ ಸಂರಕ್ಷಣೆಯ ಕಾಯ್ದೆಯಡಿ ಅಪರಾಧ ಎನ್ನಲಾಗಿದೆ. ಇದಲ್ಲದೇ ನಟ ದರ್ಶನ್ ಅವರ ಫಾರ್ಮ್ ಹೌಸ್‌ನಲ್ಲಿ ಇರುವ ಕೆಲವು ಪ್ರಾಣಿಪಕ್ಷಿಗಳ ಬಗ್ಗೆ ಕೂಡ ಅರಣ್ಯ ಇಲಾಖೆ ಮಾಹಿತಿ ಕೇಳಿದ್ದು, ಮಾಲೀಕತ್ವವನ್ನು ತಿಳಿಸುವಂತೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.