ಬಿಜೆಪಿಗೆ ಮಾನ ಮಾರ್ಯದೆ ಇಲ್ಲ; ಭದ್ರಾವತಿ ಕಾರ್ಖಾನೆ ಮುಚ್ಚಿಸಿದ್ರು: ಬಿ.ಕೆ.ಸಂಗಮೇಶ್ವರ್

ಶಿವಮೊಗ್ಗ: ಭದ್ರಾವತಿ ಕಾರ್ಖಾನೆ ಮುಚ್ಚಿದ ಬಗ್ಗೆ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿಗೆ ಒಂಥರಾ ಮಾನ ಮರ್ಯಾದೆ ಇಲ್ಲ ಎಂದು ಆರೋಪಿಸಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಈ ತನಕ ಕಾರ್ಖಾನೆ ಉಳಿಸುತ್ತೇವೆಂದು ಬಡಾಯಿ ಕೊಚ್ಚಿಕೊಂಡು ಚುನಾವಣಾ ಅಸ್ತ್ರ ಮಾಡಿಕೊಂಡು ಬಂದು ಜನರಿಗೆ ಮೋಸ ಮಾಡಿದರು.ಯಾಕಂದರೆ ಐದು ವರ್ಷಗಳ ಹಿಂದೆ ರಾಜ್ಯದ ಕಾಂಗ್ರೆಸ್ ಸರ್ಕಾರ ಕಾರ್ಖಾನಗೆ ಗಣಿ ನೀಡಿತ್ತು. ಆಗ ವಿಐಎಸ್ಎಲ್ ಫ್ಯಾಕ್ಟರಿಯನ್ನ ವ್ಯವಸ್ಥಿತವಾಗಿ ನಡೆಸುವುದಾಗಿ ಕೇಂದ್ರ ಭರವಸೆ ನೀಡಿತ್ತು.ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಮಣದುರ್ಗದಲ್ಲಿ ಗಣಿ ನೀಡಿತ್ತು. ಆದರೆ ಕೇಂದ್ರ ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ಅಭಿವೃದ್ಧಿ ಇಲ್ಲ. ಈತನಕ ಮೂರು ಜನ ಕೇಂದ್ರ ಮಂತ್ರಿಗಳು ಬಂದು ಒಬ್ಬರು 6,000ಕೋಟಿ ಅಂದರು, ಇನ್ನೊಬ್ರು 3000 ಕೋಟಿ ಅಂದರು. ಆದರೆ ಒಂದು ರೂಪಾಯಿ ಕೂಡ ಬಂದು ತಲುಪಿಲ್ಲ ಎಂದರು.