ಶ್ರೀಮುರಳಿ ಅಭಿನಯದ ಮಫ್ತಿ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡಿದ ನರ್ತನ್ ಈಗ ಚಿತ್ರದ ಪ್ರೀಕ್ವೆಲ್ ಆದ 'ಭೈರತಿ ರಣಗಲ್' ಅನ್ನು ನಿರ್ದೇಶಿಸುತ್ತಿದ್ದಾರೆ. ಗ್ಯಾಂಗ್ಸ್ಟರ್ ಸಿನಿಮಾವನ್ನು ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಗೀತಾ ಶಿವರಾಜ್ಕುಮಾರ್ ನಿರ್ಮಿಸಲಿದ್ದಾರೆ. ಶ್ರೀಮುರಳಿ ಅಭಿನಯದ ಮಫ್ತಿ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡಿದ ನರ್ತನ್ ಈಗ ಚಿತ್ರದ ಪ್ರೀಕ್ವೆಲ್ ಆದ 'ಭೈರತಿ ರಣಗಲ್' ಅನ್ನು ನಿರ್ದೇಶಿಸುತ್ತಿದ್ದಾರೆ. ಗ್ಯಾಂಗ್ಸ್ಟರ್ ಸಿನಿಮಾವನ್ನು ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಗೀತಾ ಶಿವರಾಜ್ಕುಮಾರ್ ನಿರ್ಮಿಸಲಿದ್ದಾರೆ.
'ದಿ ಎರಾ, ವೇರ್ ಇಟ್ ಆಲ್ ಬಿಗನ್' (The Era, where it all Began) ಎಂಬ ಅಡಿಬರಹದೊಂದಿಗೆ ಸೆಂಚುರಿ ಸ್ಟಾರ್ ಶಿವಣ್ಣ ಅವರ ಪೋಸ್ಟರ್ ಅನ್ನು ಅನಾವರಣಗೊಳಿಸಿರುವ ಚಿತ್ರತಂಡ, 2017ರ ಚಿತ್ರದ ಪ್ರೀಕ್ವೆಲ್ ಎಂದು ದೃಢಪಡಿಸಿದ್ದಾರೆ. ಅಲ್ಲದೆ, ಚಿತ್ರವು ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ಬಹು ಭಾಷೆಗಳಲ್ಲಿ ನಿರ್ಮಾಣವಾಗಲಿದೆ. ಈಗ ಪ್ರೀ-ಪ್ರೊಡಕ್ಷನ್ ಹಂತದಲ್ಲಿರುವ ಚಿತ್ರವು ಮೇ ತಿಂಗಳಲ್ಲಿ ಸೆಟ್ಟೇರಲಿದ್ದು, ಜೂನ್ ಮೊದಲ ವಾರದಿಂದ ಶಿವಣ್ಣ ಶೂಟಿಂಗ್ಗೆ ಸೇರಲಿದ್ದಾರೆ ಎನ್ನಲಾಗಿದೆ. ಈಮಧ್ಯೆ, ಭೈರತಿ ರಣಗಲ್ನಲ್ಲಿ ಆಯಾ ಪಾತ್ರಗಳನ್ನು ನಿರ್ವಹಿಸಲು ಮಫ್ತಿಯಲ್ಲಿದ್ದ ದೇವರಾಜ್, ಮಧು ಗುರುಸ್ವಾಮಿ, ವಸಿಷ್ಟ ಸಿಂಹ ಮತ್ತು ಬಾಬು ಹಿರಣ್ಣಯ್ಯ ಅವರನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ಚಿತ್ರತಂಡ ನಿರತವಾಗಿದೆ.
ಈ ಹಿಂದೆ ಮಫ್ತಿಯಲ್ಲಿ ಕೆಲಸ ಮಾಡಿದ್ದ ಸಂಗೀತ ನಿರ್ದೇಶಕ ರವಿ ಬಸ್ರೂರ್ ಮತ್ತು ಛಾಯಾಗ್ರಾಹಕ ನವೀನ್ ಕುಮಾರ್ ಅವರೇ ಈ ಚಿತ್ರಕ್ಕೂ ನರ್ತನ್ ಜೊತೆ ಕೈಜೋಡಿಸಲಿದ್ದಾರೆ.ಕೆವಿಎನ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಿಸಲಾದ ಸಿನಿಮಾಗಾಗಿ ನರ್ತನ್ ಅವರು ಆರ್ಆರ್ಆರ್ ನಟ ರಾಮ್ ಚರಣ್ ಜೊತೆ ಕೈಜೋಡಿಸುವ ಸುದ್ದಿಯೂ ಇದೆ ಮತ್ತು ಡಿಸೆಂಬರ್ನಲ್ಲಿ ರಾಮ್ ಚರಣ್ ಅವರ ಪ್ರಾಜೆಕ್ಟ್ಗಾಗಿ ತಯಾರಿಯನ್ನು ಪ್ರಾರಂಭಿಸಲು ನಿರ್ದೇಶಕರು ಯೋಜಿಸಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಅಧಿಕೃತ ದೃಢೀಕರಣ ಇನ್ನೂ ಲಭ್ಯವಾಗಬೇಕಿದೆ.