ಟಗರು ಎಗರಿ ಬೀಳುತ್ತೆ ಗುಸು ಗುಸು: ಸಿದ್ಧರಾಮಯ್ಯ ಬಗ್ಗೆ ಹೇಳಿಕೆಗೆ ಕ್ಷಮೆ ಕೇಳಿದ ಮುಕುಡಪ್ಪ

ಬೆಂಗಳೂರು: ಸಿದ್ದರಾಮಯ್ಯ ಬಗ್ಗೆ ಹೇಳಿಕೆಗೆ ಮುಕುಡಪ್ಪ ಕ್ಷಮೆಯಾಚಿಸಿದ್ದಾರೆ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಕುರುಬ ಸಮುದಾಯದ ಮುಖಂಡ ಕೆ. ಮುಕುಡಪ್ಪ ಹೇಳಿದ್ದಾರೆ.
ಸಿದ್ದರಾಮಯ್ಯ ಕುರುಬರ ಸಂಘ ಹಾಗೂ ಮಠ ಕಟ್ಟಿದ್ದಾರೆ.
ನಿನ್ನೆ ಕುರುಬ ಸಮುದಾಯದ ಮುಖಂಡರ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಪಿಸುಮಾತು ಸಂಭಾಷಣೆ ನಡೆಸಿದ್ದ ಮುಕುಡಪ್ಪ ಮತ್ತು ಎಸ್. ಪುಟ್ಟಸ್ವಾಮಿ ಅವರು ಒಂದೇ ಟಗರು 20 ಕುರಿಗಳ ಮೇಲೆ ಎಗರಿ ಬೀಳುತ್ತದೆ. ಮುರಘಾ ಸ್ವಾಮಿ ತರ ಎಲ್ಲಾ ಇದಾರೆ ಎಂದೆಲ್ಲಾ ಮಾತನಾಡಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು.