ಹುಬ್ಬಳ್ಳಿ: ಸಿಎಂ ನಿವಾಸದ ಎದುರು ಕೋವಿಡ್ ನಿಯಮ ಉಲ್ಲಂಘನೆ: ಬೊಮ್ಮಾಯಿ ಸಾಹೇಬ್ರೆ ಏನಿದು

ಹುಬ್ಬಳ್ಳಿ: ಕಿಲ್ಲರ್ ಕೊರೋನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಲ್ಲದೆ ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಸಾಕಷ್ಟು ನಿರ್ದೇಶನ ನೀಡಲಾಗುತ್ತಿದೆ. ಆದರೆ ಸಿಎಂ ಮನೆಯ ಮುಂದೆಯೇ ಕೋವಿಡ್ ನಿಯಮಗಳನ್ನು ಬ್ರೇಕ್ ಮಾಡಲಾಗಿದೆ.
ಹೌದು, ಸಿಎಂ ಬಸವರಾಜ ಬೊಮ್ಮಾಯಿಯವರು ಹುಬ್ಬಳ್ಳಿಯ ಅಶೋಕನಗರದ ಮನೆಗೆ ಆಗಮಿಸಿದ್ದು, ಸಾರ್ವಜನಿಕರು ಅಹವಾಲು ಸ್ವೀಕಾರ ಸಂದರ್ಭದಲ್ಲಿ ನಿಯಮ ಉಲ್ಲಂಘನೆ ಮಾಡಿದ್ದಾರೆ.
ಸಿಎಂ ಮನೆಯ ಮುಂದೆಯೇ ಅಹವಾಲು ನೀಡಲು ನೂಕುನುಗ್ಗಲಾಗಿ ಜನರು ಸೇರಿದ್ದು, ನಿವಾಸದ ಎದುರು ಬೆಳಿಗ್ಗೆಯಿಂದಲೇ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದಾರೆ. ಕೋವಿಡ್ ನಿಯಮ ಉಲ್ಲಂಘಿಸಿ ಸಿಎಂ ಗೆ ಸಾರ್ವಜನಿಕರು ಅಹವಾಲು ನೀಡಿದ್ದಾರೆ.