ಅತ್ಯಾಚಾರವೆಸಗಿದ ಶಿಕ್ಷಕನೊಂದಿಗೇ ನೆಮ್ಮದಿಯಿಂದಿದ್ದಾಳೆ ಸಂತ್ರಸ್ಥೆ: ಪೊಲೀಸರ ಹೇಳಿಕೆ
ನವದೆಹಲಿ: ಅತ್ಯಾಚಾರ ಎಸಗಿದ ಆರೋಪಿಯೊಂದಿಗೆ ಸಂತ್ರಸ್ಥೆ "ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾಳೆ" ಎಂದು ಒಡಿಶಾ ಪೊಲೀಸರು ಇತ್ತೀಚೆಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ(NHRC) ಮಾಹಿತಿ ನೀಡಿದ್ದಾರೆ.
ಸರ್ಕಾರಿ ಬಾಲಕಿಯರ ಶಾಲೆಯ ಮುಖ್ಯೋಪಾಧ್ಯಾಯರು, ಸಂತ್ರಸ್ಥೆ ಮತ್ತು ಅವರ ಮಗಳು ಒಂದೇ ಸೂರಿನಡಿ ವಾಸಿಸುತ್ತಿದ್ದಾರೆ ಎಂದು ರಾಜ್ಯ ಪೊಲೀಸರು ತಿಳಿಸಿದ್ದಾರೆ.
ಮುಖ್ಯ ಶಿಕ್ಷಕರನ್ನು ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಬಂಧಿಸಲಾಗಿತ್ತು. ಮಾನವ ಹಕ್ಕುಗಳ ಸಂಘಟನೆಯು ಕಾರ್ಯಕರ್ತ ರಾಧಾಕಾಂತ ತ್ರಿಪಾಠಿ ಸಲ್ಲಿಸಿದ ದೂರಿಗೆ ಪ್ರತಿಕ್ರಿಯೆ ಕೇಳಿದ ನಂತರ ಹೇಳಿಕೆಯನ್ನು ಹಸ್ತಾಂತರಿಸಲಾಗಿದೆ.
2020 ರಲ್ಲಿ ಆರೋಪಿಯನ್ನು ಬಂಧಿಸಲಾಗಿತ್ತು.
ತ್ರಿಪಾಠಿ, ಬುಡಕಟ್ಟು ಹುಡುಗಿಯರು ಶಾಲೆಗಳಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ಆರೋಪಿಸಿದ್ದರು. ಸಂತ್ರಸ್ಥರಾದವರಿಗೆ ಪುನರ್ವಸತಿ ಕ್ರಮಗಳ ಜೊತೆಗೆ ಅಂತಹ ಸಂದರ್ಭಗಳಲ್ಲಿ ತೆಗೆದುಕೊಂಡಿರುವ ಪೋಲಿಸ್ ಕ್ರಮದ ಬಗ್ಗೆ ಮಾಹಿತಿ ಕೋರಿದ್ದರು.
ಒಡಿಶಾ ಪೊಲೀಸರು ನೀಡಿರುವ ಹೇಳಿಕೆಯ ಪ್ರಕಾರ, ಒಡಿಶಾದ ಕೋರಾಪುಟ್‌ನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಆದಿವಾಸಿ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರದ ಆರೋಪಕ್ಕೆ ಸಂಬಂಧಿಸಿದ್ದಾಗಿದೆ. ಶಾಲೆಯ ಮುಖ್ಯೋಪಾಧ್ಯಾಯ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಯಾಗಲು ಕಾರಣವಾಗಿದ್ದಾನೆ. ಆರೋಪಿಯನ್ನು ಬಂಧಿಸಿ ನವೆಂಬರ್ 16, 2020 ರವರೆಗೆ ಬಂಧನದಲ್ಲಿರಿಸಲಾಗಿದೆ.
ಏತನ್ಮಧ್ಯೆ, ಬಾಲಕಿಯು ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಜಿಲ್ಲಾ ಅಧಿಕಾರಿಗಳು ಆಕೆಗೆ ಆರೋಗ್ಯ ಸೌಲಭ್ಯ ಒದಗಿಸಲು ಸಹಾಯ ಮಾಡಿದ್ದಾರೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ(ಡಿಎಲ್‌ಎಸ್‌ಎ) 1.5 ಲಕ್ಷ ರೂಪಾಯಿ ಪರಿಹಾರ ಒದಗಿಸಲಾಗಿದೆ. ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಆಕೆಗೆ 10,000 ರೂ. ನೀಡಿದೆ. ರಾಜ್ಯ ಮಾನವ ಹಕ್ಕುಗಳ ಆಯೋಗದ ಆದೇಶದ ಮೇರೆಗೆ ಆಕೆಗೆ 3.75 ಲಕ್ಷ ರೂಪಾಯಿಗಳನ್ನು ಪಾವತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋರಾಪುಟ್ ಎಸ್‌ಪಿಯ ಪ್ರಕಾರ, ಮಗು ನವೆಂಬರ್ 2020 ರವರೆಗೆ ಶಿಶುಪಾಲನಾ ಕೇಂದ್ರದ ಆರೈಕೆಯಲ್ಲಿದೆ. ಜಾಮೀನು ಪಡೆದ ನಂತರ, ಆರೋಪಿಯು ವಿದ್ಯಾರ್ಥಿಯ ಗ್ರಾಮಕ್ಕೆ ಹೋಗಿ ಅವಳನ್ನು ಕರೆತಂದನು. ಆರೋಪಿಯೊಂದಿಗೆ ವಾಸಿಸಲು ಹುಡುಗಿ ಒಪ್ಪಿದ್ದಾಳೆ. ಕೋರಾಪುಟ್‌ನಲ್ಲಿ ಬಾಡಿಗೆ ಮನೆಯಲ್ಲಿ ಇಬ್ಬರೂ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದು, ಹುಡುಗಿ ಆರೋಪಿಯೊಂದಿಗೆ ಸಂತೋಷವಾಗಿದ್ದಾಳೆ ಎಂದು ಹೇಳಲಾಗಿದೆ.