ಫುಟ್ಬಾಲ್ ಆಟಗಾರ ಕೈಲಿಯನ್ ಎಂಬಾಪೆಗೆ ಇಂದು ಜನ್ಮದಿನದ ಸಂಭ್ರಮ
1998 ಡಿ.20 ರಂದು ಫ್ರಾನ್ಸ್ನ ಪ್ಯಾರಿಸ್ನಲ್ಲಿ ಜನಿಸಿದ ಕೈಲಿಯನ್ ಎಂಬಾಪೆ ಇಂದು 24ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ರೊನಾಲ್ಡೊ ಯುಗ ಅಂತ್ಯವಾಗುತ್ತಿದ್ದಂತೆ ಕಾಲ್ಚೆಂಡಿನ ಜಗತ್ತನ್ನು ಆಳುವುದಕ್ಕಾಗಿಯೇ ಉದಯಿಸಿರುವ ಆಟಗಾರ ಫ್ರಾನ್ಸ್ನ ಎಂಬಾಪೆ. ಈತ ಮುಂದೆ ವಿಶ್ವ ಫುಟ್ಬಾಲ್ ಲೋಕದ ದಿಗ್ಗಜ ಆಟಗಾರರ ಪಟ್ಟಿಗೆ ಸೇರಲಿದ್ದಾನೆ ಎಂದು ಈಗಾಗಲೇ ಹಲವರು ಅಭಿಪ್ರಾಯಪಟ್ಟಿದ್ದಾರೆ. ಜಿನೆದಿನ್ ಜಿದಾನೆ, ರೊನಾಲ್ಡೊ ಅವರಂತಹ ಘಟಾನುಘಟಿ ಆಟಗಾರರನ್ನು ಆದರ್ಶವಾಗಿ ಕಂಡವರು ಎಂಬಾಪೆ.