ನಮ್ಮ ಬಡಾವಣೆ ಅಕ್ರಮವಾಗಿದ್ದರೆ,ತೆರೆವು ಮಾಡಿ ಶಾಸಕ ಅಮೃತ ದೇಸಾಯಿ.
ಧಾರವಾಡ.
ಧಾರವಾಡ-ಹು ಅವಳಿನಗರದಲ್ಲಿ ತಲೆ ಎತ್ತುತ್ತಿರುವ ಅಕ್ರಮ ಲೇಔಟ್ಗಳ,ವಿರುದ್ಧ ಶಾಸಕ ಅಮೃತ ದೇಸಾಯಿ ಈಗಾಗಲೇ ವಿಧಾನಸಭೆಯಲ್ಲಿ ಮಾತನಾಡಿದ್ದರು, ಆದ್ರೆ ಗರಗ ಗ್ರಾಮದಲ್ಲಿ ಅವರ ಹೆಸರಿನಲ್ಲೇ ಅಮೃತ ಬಡಾವಣೆ ಎಂಬ ಅಕ್ರಮ ಬಡಾವಣೆ ಇದೆ ಎಂಬ ಆರೋಪ ಕೇಳಿ ಬಂದಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಶಾಸಕ ಅಮೃತ ದೇಸಾಯಿ ಅವರು, ಅಮೃತ ಬಡಾವಣೆ ಅಕ್ರಮವಾಗಿದ್ದರೆ ಅದನ್ನೂ ತೆರವುಗೊಳಿಸುತ್ತೇವೆ ಎಂದು ತಿರುಗೇಟು ನೀಡಿದ್ದಾರೆ. ನಿನ್ನೆಯಷ್ಟೆ ಧಾರವಾಡದ ಮಟ್ಟಿ ಪ್ಲಾಟ್ನಲ್ಲಿ ನಿರ್ಮಾಣವಾಗಿದ್ದ ಅಕ್ರಮ ಲೇಔಟ್ ತೆರವು ಕಾರ್ಯಾಚರಣೆ ವೇಳೆ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಅವರು, ವಿಧಾನಸಭೆಯಲ್ಲಿ ಅಕ್ರಮ ಲೇಔಟ್ಗಳ ಬಗ್ಗೆ ಮಾತನಾಡುವ ಶಾಸಕರು, ತಮ್ಮ ಕ್ಷೇತ್ರ ವ್ಯಾಪ್ತಿಯ ಗರಗ ಗ್ರಾಮದಲ್ಲಿ ತಮ್ಮದೇ ಹೆಸರಿನಲ್ಲಿ ಅಕ್ರಮ ಬಡಾವಣೆ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ ಎಂಬ ಆರೋಪ ಮಾಡಿದ್ದರು.ಇದಕ್ಕೆ ತಿರುಗೇಟು ನೀಡಿರುವ ಶಾಸಕರು, ಕೆಲವರು ಆರೋಪ ಮಾಡುವುದಕ್ಕಾಗಿಯೇ ಇರುತ್ತಾರೆ. ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡುವುದು ಬೇಡ. ನನ್ನ ಹೆಸರಿನಲ್ಲಿರುವ ಅಮೃತ ಬಡಾವಣೆ ಅಕ್ರಮವಾಗಿದ್ದರೆ ಅದನ್ನೂ ತೆರವುಗೊಳಿಸುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.