ಪುನೀತ್ ನಿಧನದ ಬೆನ್ನಲ್ಲೇ ಅನ್ನ ಸಂತರ್ಪಣಿ ಮಾಡುವ ಮೂಲಕ ಶ್ರದ್ಧಾಂಜಲಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೃದಯ ಆಘಾತದಿಂದ ನಿಧನರಾಗಿದ್ದು, ನಾಡಿನ ಜನ ದುಃಖದಲ್ಲಿ ಮುಳಗಿದ್ದರು. ಅದ್ರಂತೆ ಧಾರವಾಡ ಹೊರವಲಯದ ಅಮರಗೋಳ ಗ್ರಾಮದಲ್ಲಿ ವಿಶೇಷವಾಗಿ ಅಪ್ಪು ಅವರ ಶ್ರದ್ಧಾಂಜಲಿ ಮಾಡಿದ್ದಾರೆ. ಹೌದು ಅಮರಗೋಳ ಗ್ರಾಮದ ಹಿರಿಯರು ಯುವಕರು ಸೇರಿ ಅನ್ನಸಂತರ್ಪಣೆ ಇಡೀ ಊರಿಗೆ ಊಟ ನೀಡಿ ಬಹಳ ವಿಶೇಷವಾಗಿ ಪುನೀತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಡಾ. ರಾಜ್ ಕುಟುಂಬದ ಕೊನೆಯ ಪುತ್ರ ಆಕಸ್ಮಿಕವಾಗಿ ಮೃತಪಟ್ಟಿದ್ದು, ಯಾರು ನಂಬಲಾರದ ವಿಚಾರವಾಗಿದೆ. ಪುನೀತ್ ರಾಜಕುಮಾರ್ ದೊಡ್ಡದಾದ ಬ್ಯಾನರ್ ಗೆ ಮಾಲಾರ್ಪಣೆ ಸಲ್ಲಿಸಿ, ಇಡೀ ಅಮರಗೋಳ ಗ್ರಾಮಕ್ಕೆ ಅನ್ನಸಂತರ್ಪಣೆ ಸೇವೆ ಸಲ್ಲಿಸಿ.ಪುನೀತ್ ಅವರಿಗೆ ವಿಶೇಷವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ..