ಮದುವೆಗೆ ಮನೆಯವರ ವಿರೋಧ: ವಿಷ್ ಸೇವಿಸಿ ಪ್ರೇಮಿಗಳು ಆತ್ಮಹತ್ಯೆ

ಹುಬ್ಬಳ್ಳಿ: ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ನವಲಗುಂದ ತಾಲೂಕಿನ ತಡಹಾಳ ಗ್ರಾಮದಲ್ಲಿ ನಡೆದಿದೆ.
ನವಲಗುಂದ ತಾಲೂಕಿನ ತಡಹಾಳ ಗ್ರಾಮದ ಸಾವಿತ್ರಿ ನರಗುಂದ, ಮಲ್ಲಪ್ಪ ಮಾದರ ಪರಸ್ಪರ ಪ್ರೀತಿಸುತ್ತಿದ್ದರು. ಪೋಷಕರು ಅನ್ಯ ಜಾತಿಯ ಪ್ರೀತಿಗೆ ವಿರೋಧಿಸಿದ್ದಕ್ಕಾಗಿ ಪ್ರೇಮಿಗಳಿಬ್ಬರು ವಿಷ ಸೇವಿಸಿದ್ದಾರೆ. ಅಲ್ಲದೇ ಯುವತಿಯ ಮನೆಯಲ್ಲಿ ಬೇರೆ ಯುವಕನೊಂದಿಗೆ ವಿವಾಹ ಮಾಡಲು ಸಿದ್ಧತೆ ನಡೆಸಿದ್ದರು ಎಂದು ಹೇಳಲಾಗುತ್ತಿದೆ. ಈ ಕಾರಣದಿಂದ ಮನನೊಂದು ಪ್ರೇಮಿಗಳು ವಿಷ ಸೇವಿಸಿ ಸಾವನ್ನಪ್ಪಿದ್ದಾರೆ.
ಇನ್ನು ಯುವತಿ ಸಾವಿತ್ರಿ ನಿನ್ನೆ ಸಾವನ್ನಪ್ಪಿದ್ದರೆ, ಗಂಭೀರ ಸ್ಥಿತಿಯಲ್ಲಿದ್ದ ಯುವಕ ಮಲ್ಲಪ್ಪ ಇಂದು ಬೆಳಗ್ಗೆ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಪ್ರೇಮಿಗಳಿಬ್ಬರನ್ನೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಪ್ರೇಮಿಗಳಿಬ್ಬರೂ ಸಾವನ್ನಪ್ಪಿದ್ದಾರೆ. ನವಲಗುಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನವೀನ ಸೋಲಾರಗೊಪ್ಪ ನೈನ್ ಲೈವ್ ನ್ಯೂಸ್ ಧಾರವಾಡ.