ಮಲೈ ಮಹದೇಶ್ವರ ಸ್ವಾಮಿ ಹುಂಡಿ ಎಣಿಕೆ ಕಾರ್ಯ : 1.33 ಕೋಟಿ ಹಣ ಸಂಗ್ರಹ

ಮಲೈ ಮಹದೇಶ್ವರ ಸ್ವಾಮಿ ಹುಂಡಿ ಎಣಿಕೆ ಕಾರ್ಯ : 1.33 ಕೋಟಿ ಹಣ ಸಂಗ್ರಹ

ಚಾಮರಾಜನಗರ: ದಕ್ಷಿಣ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಮಲೆ ಮಹದೇಶ್ವರ (Malai Mahadeshwar Swami) ಸ್ವಾಮಿ ಬೆಟ್ಟ ಹುಂಡಿ ಎಣಿಕೆ ನಡೆದಿದ್ದು, ಬರೊಬ್ಬರಿ,1.33 ಕೋಟಿ ಹಣ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ.

ಭಕ್ತರಿಂದ ಮಲೈ ಮಹದೇಶ್ವರ ಸ್ವಾಮಿ ಸನ್ನಿಧಿಗೆ ಅಪಾರ ಪ್ರಮಾಣದ ಹಣ ಹರಿದು ಬಂದಿದ್ದು,. ನಿನ್ನೆ ಬೆಳಿಗ್ಗೆಯಿಂದ ರಾತ್ರಿವರೆಗೂ ಹುಂಡಿ ಎಣಿಕೆ ಮಾಡಲಾಯಿತು, ಕೇವಲ 22 ದಿನಗಳಲ್ಲಿ ಒಟ್ಟು 1.33 ಕೋಟಿ ರೂಪಾಯಿ, 38 ಗ್ರಾಂ ಚಿನ್ನ ಹಾಗೂ 1.6 ಕೆ.ಜಿ. ಬೆಳ್ಳಿ ಮಹದೇಶ್ವರನ ಹುಂಡಿಯಲ್ಲಿ ಸಂಗ್ರಹವಾಗಿದೆ.

ಬೆಟ್ಟಕ್ಕೆ ಮಾದಪ್ಪನ ದರ್ಶನಕ್ಕೆ ಬಂದವರು ಹರಕೆ ತೀರಿಸಿ ಹುಂಡಿಗೆ ತಮಗೆ ಕೈಲಾದಷ್ಟು ಹಣ, ಬಂಗಾರ, ಬೆಳ್ಳಿ ಸಮರ್ಪಿಸಿದ್ದಾರೆ. ಕಳೆದ 22 ದಿನಗಳಲ್ಲಿ ಒಟ್ಟು 1,33,37,871 ರೂ.ಗಳನ್ನ ಭಕ್ತರು ಕಾಣಿಕೆಯಾಗಿ ಮಾದಪ್ಪಗೆ ಅರ್ಪಿಸಿದ್ದಾರೆ. ಜೊತೆಗೆ 38 ಗ್ರಾಂ ಚಿನ್ನ ಹಾಗೂ 1.6 ಕೆ.ಜಿ. ಬೆಳ್ಳಿಯನ್ನು ಭಕ್ತರು ಹುಂಡಿಯಲ್ಲಿ ಹಾಕಿದ್ದಾರೆ.

ದಟ್ಟ ಕಾಡಿನ ಮಧ್ಯೆ ಮಲೆ ಮಹದೇಶ್ವರ ದೇವಾಲಯವು ಯಾತ್ರಾರ್ಥಿಗಳು ಮಾತ್ರವಲ್ಲದೆ ಪ್ರಕೃತಿ ಪ್ರಿಯರನ್ನು ಆಕರ್ಷಿಸುತ್ತದೆ. ಇದು ಮೈಸೂರುನಿಂದ ಸುಮಾರು 150 ಕಿ.ಮೀ ಮತ್ತು ಬೆಂಗಳೂರಿನಿಂದ 210 ಕಿ.ಮೀ ದೂರದಲ್ಲಿದ್ದರು ಸಾವಿರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಾರೆ.,