ಬಿಬಿಎಂಪಿ ಮೈದಾನಗಳಲ್ಲಿ ಪಟಾಕಿ ಚಿಲ್ಲರೆ ಮಳಿಗೆ ತೆರೆಯಲು ಅವಕಾಶ: ಅರ್ಜಿ ಸಲ್ಲಿಕೆಗೆ ನಾಳೆ ಕೊನೇ ದಿನ

ಬಿಬಿಎಂಪಿ ಮೈದಾನಗಳಲ್ಲಿ ಪಟಾಕಿ ಚಿಲ್ಲರೆ ಮಳಿಗೆ ತೆರೆಯಲು ಅವಕಾಶ: ಅರ್ಜಿ ಸಲ್ಲಿಕೆಗೆ ನಾಳೆ ಕೊನೇ ದಿನ

ಬೆಂಗಳೂರು: ಬಿಬಿಎಂಪಿ ಮೈದಾನಗಳಲ್ಲಿ ತಾತ್ಕಾಲಿಕ ಪಟಾಕಿ ಚಿಲ್ಲರೆ ಮಳಿಗೆ ತೆರೆಯಲು ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಸೇವಾ ಸಿಂಧು ವೆಬ್ ಪೋರ್ಟಲ್ ಅಥವಾ ಆನ್‌ಲೈನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ಅ.17 ರಿಂದ 18ರ ಸಂಜೆ 5.30ರ ವರೆಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಪ್ರಕ್ರಿಯೆ ಶುಲ್ಕ 5 ಸಾವಿರ ರೂ. ಅನ್ನು ಆನ್‌ಲೈನ್‌ನಲ್ಲಿ ಪಾವತಿ ಮಾಡಬೇಕು. ಹೆಚ್ಚುವರಿ ಪೊಲೀಸ್ ಆಯುಕ್ತರು, ಆಡಳಿತ ವಿಭಾಗ ಅವರ ಹೆಸರಿನಲ್ಲಿ 25 ಸಾವಿರ ರೂ. ಮೌಲ್ಯದ ಡಿಡಿ ಸಲ್ಲಿಸಬೇಕು.

ಇದಲ್ಲದೆ, ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಡಿಜಿಪಿ ಆಯಂಡ್ ಡಿಜಿ ಹೆಸರಿನಲ್ಲಿ 5 ಸಾವಿರ ರೂ. ಮೌಲ್ಯದ ಡಿಡಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಪೊಲೀಸ್ ಸಂಪರ್ಕ ಸಂಖ್ಯೆ 080-2294 2373, 2294 3553 ಅಥವಾ 2294 2358 ಸಂಪರ್ಕಿಸುವಂತೆ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.