ಕಚೇರಿಯಲ್ಲಿನ ಫೈಲ್ ನಾಪತ್ತೆಯಾಗಿದ್ದಕ್ಕೆ ಬೇಸತ್ತು ನೆಲಮಂಗಲದಲ್ಲಿ PWD ಅಧಿಕಾರಿ ಆತ್ಮಹತ್ಯೆಗೆ ಶರಣು

ಕಚೇರಿಯಲ್ಲಿನ ಫೈಲ್ ನಾಪತ್ತೆಯಾಗಿದ್ದಕ್ಕೆ ಬೇಸತ್ತು ನೆಲಮಂಗಲದಲ್ಲಿ PWD ಅಧಿಕಾರಿ ಆತ್ಮಹತ್ಯೆಗೆ ಶರಣು

ಬೆಂಗಳೂರು: ಪಿ ಡಬ್ಲ್ಯೂ ಡಿ ಕಚೇರಿಯಲ್ಲಿನ ಕೆಲ ಮುಖ್ಯ ಕಡತಗಳು ನಾಪತ್ತೆಯಾಗಿದ್ದಕ್ಕೆ ಬೇಸತ್ತು, ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು ನಡೆದಿದೆ.

ಬೆಂಗಳೂರಿನ ನೆಲಮಂಗಲದ ಬಳಿಯ ಶಿವಗಂಗೆ ಪ್ರವಾಸಿ ಮಂದಿರದಲ್ಲಿ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಪಿಡಬ್ಲ್ಯೂಡಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಂತ ಲಕ್ಷ್ಮೀನರಸಿಂಹಯ್ಯ(56) ಎಂಬುವರೇ ಆತ್ಮಹತ್ಯೆಗೆ ಶರಣಾಗಿರುವಂತ ಅಧಿಕಾರಿಯಾಗಿದ್ದಾರೆ.

ತುಮಕೂರಿನ ಮಧುಗಿರಿಯಲ್ಲಿ ಪಿಡಬ್ಲ್ಯೂಡಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಂತ ಲಕ್ಷ್ಮೀನರಸಿಂಹಯ್ಯ ಅವರ ಕಚೇರಿಯಲ್ಲಿ ಕೆಲ ಫೈಲ್ ಗಳು ಮಿಸ್ಸಾಗಿದ್ದವಂತೆ. ಈ ಸಂಬಂಧ ಮೇಲಧಿಕಾರಿಗಳು ತನಿಖೆಗೂ ಸೂಚಿಸಿದ್ದರಂತೆ.

ಈ ಹಿನ್ನಲೆಯಲ್ಲಿ ತಮ್ಮ ಮೇಲೆ ಶಿಸ್ತು ಕ್ರಮ ಕೈಗೊಳ್ಳಬಹುದು ಎಂಬ ಭಯದಲ್ಲಿ ಲಕ್ಷ್ಮೀನರಸಿಂಹಯ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ವಿಷಯ ತಿಳಿದು ಸ್ಥಳಕ್ಕೆ ದಾಬಾಸ್ ಪೇಟೆ ಠಾಣೆಯ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.