"ಪೇ ಸಿಎಂ" ಅಧಿಕೃತಗೊಳಿಸಲು ಮುಂದಾದ ರಾಜ್ಯ ಸರ್ಕಾರ : ಏನಿದು ಹೊಸ ಪ್ಲ್ಯಾನ್..?

ಬೆಂಗಳೂರು : ರಾಜ್ಯದಲ್ಲಿ ಕಳೆದೆರಡು ದಿನದಿಂದ ಭಾರೀ ಚರ್ಚೆಯಾಗುತ್ತಿರುವ 'ಪೇ ಸಿಎಂ' ನ್ನು ಸರ್ಕಾರ ಅಧಿಕೃತಗೊಳಿಸಲು ಮುಂದಾಗಿದೆ.
ಹೌದು, ಮುಖ್ಯಮಂತ್ರಿ ಪರಿಹಾರ ನಿಧಿ ಹೆಸರಿನಲ್ಲಿ ''ಪೇ ಸಿಎಂ ಡಿಜಿಟಲ್'' ' ಪೇ ಟು ''ಚೀಫ್ ಮಿನಿಸ್ಟರ್ ರಿಲೀಫ್ ಫಂಡ್'' ( ಸಿಎಂ ಆರ್ ಎಫ್) ಎಂಬ ಡಿಜಿಟಲ್ ಆಯಪ್ ಅಭಿವೃದ್ಧಿಪಡಿಸಿ ಆ ಮೂಲಕ ಸರ್ಕಾರ ಅಧಿಕೃತಗೊಳಿಸಲು ಮುಂದಾಗಿದೆ.
ಪೇ ಸಿಎಂ ಹೆಸರಿನಡಿ ಡಿಜಿಟಲ್ ಆಯಪ್ ಅಭಿವೃದ್ಧಿಪಡಿಸಿ ಈ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಾರ್ವಜನಿಕರು , ಸಂಘ ಸಂಸ್ಥೆಗಳು ನೆರವು ನೀಡಲು ಸಹಾಯವಾಗುವಂತೆ ಮಾಡಬಹುದು ಎಂದು ಆಡಳಿತ ಪಕ್ಷದ ಸದಸ್ಯ ಎಂ ಕೆ ಪ್ರಾಣೇಶ್ ಸಭಾಪತಿಗಳಿಗೆ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿಗಳ ಪರಿಹಾರ ನಿಧಿಯನ್ನು ಡಿಜಿಟಲ್ ಮಾಡುವ ಮೂಲಕ ಪೇಸಿಎಂ ಆಯಪ್ ನ್ನು 'ಪೇ ಟು ಚೀಫ್ ಮಿನಿಸ್ಟರ್' ರಿಲೀಫ್ ಫಂಡ್ ಎಂಬ ಹೆಸರಿನಲ್ಲಿ ಆಯಪ್ ಸಿದ್ದಪಡಿಸಿ ಆ ಮೂಲಕ ಪರಿಹಾರ ನಿಧಿಗೆ ಸಾರ್ವಜನಿಕರು , ಸಂಘ ಸಂಸ್ಥೆಗಳು ನೆರವು ನೀಡಲು ಸಹಾಯವಾಗುವಂತೆ ಮಾಡಬಹುದು. ಸಾರ್ವಜನಿಕರು, ಸಂಘ ಸಂಸ್ಥೆಗಳು, ದಾನಿಗಳು ತಮ್ಮ ಕೈಲಾದಷ್ಟು ಹಣವನ್ನು ದೇಣಿಗೆ ನೀಡಿ ಸಂಕಷ್ಟದಲ್ಲಿರುವ ಬಡ ಕುಟುಂಬಗಳ ನೆರವಿಗೆ ಧಾವಿಸಲು ಅವಕಾಶ ಕಲ್ಪಿಸಿಕೊಟ್ಟಂತಾಗಲಿದೆ ಎಂದು ಪ್ರಾಣೇಶ್ ಮನವಿ ಮಾಡಿದ್ದಾರೆ.