ಬಸ್ ಸಂಚಾರ ಬಂದ್ ಮಾಡಿದ ವಿದ್ಯಾರ್ಥಿಗಳು
ಬಸ್ ಪಾಸ್ ವಿಚಾರವಾಗಿ ಮುಂಡರಗಿ ಹಾಗೂ ಗದಗ ಮಾರ್ಗದ ಬಸ್ ಸಂಚಾರ ಬಂದ್ ಮಾಡಿ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ತೊಡಗಿದ ಘಟನೆ ಗದಗ ತಾಲೂಕಿನ ಪಾಪನಾಶಿ ಗ್ರಾಮದಲ್ಲಿ ನಡೆದಿದೆ. ವಿದ್ಯಾರ್ಥಿಗಳು ಪ್ರತಿದಿನ ಆಧಾರ್ ಕಾರ್ರ್ಡ್ ತೋರಿಸಿ ಕಾಲೇಜಿಗೆ ಪ್ರಯಾಣಿಸುತ್ತಿದ್ದರು. ಆದರೆ ಈಗ ಕಂಡಕ್ಟರ್ ಇಂದಿನಿಂದ ಕಡ್ಡಾಯವಾಗಿ ಪಾಸ್ ತೋರಿಸಬೇಕೆಂದು ಹೇಳುತ್ತಿದ್ದು, ಪ್ರಯಾಣಕ್ಕೆ ಅವಕಾಶ ನೀಡದ ಹಿನ್ನೆಲೆ ಪ್ರತಿಭಟನೆ ಕೈಗೊಂಡರು.