ಸಮಾಜದಲ್ಲಿ ಗುರು ಶಿಷ್ಯ ಪರಂಪರೆಗೆ ವಿಶಿಷ್ಟ ಸ್ಥಾನ: ಬೆಳಗಲಿ
ಶಿಗ್ಗಾಂವಿ
ಶಿಗ್ಗಾಂವಿ ಪಟ್ಟಣದ ಹಳೆ ಕೋರ್ಟ್ ಆವರಣದ ಕಚೇರಿಯಲ್ಲಿ ಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾವೇರಿ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ ಲಿ.ಪುಟ್ಟರಾಜ ಕವಿ ಗವಾಯಿಗಳವರ 11ನೇ ವರ್ಷದ ಪುಣ್ಯ ಸ್ಮರಣೋತ್ಸವ ಉದ್ಘಾಟಿಸಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಗೌರವಾಧ್ಯಕ್ಷ ಗಾ.ಪಂ.ಪು.ಗ ಕಲಾ ಸಂಸ್ಥೆ ಕೆ.ಕೊಟ್ರೇಶ ಮಾಸ್ತರ ಬೆಳಗಲಿ ಅವರು, ಪ್ರಾಚೀನ ಕಾಲದಿಂದಲೂ ಗುರು ಶಿಷ್ಯ ಪರಂಪರೆಗೆ ವಿಶಿಷ್ಟ ಸ್ಥಾನವಿದ್ದು, ಇಂದಿಗೂ ಮುನ್ನಡೆದು ಬಂದಿದೆ. ಆಧುನಿಕ ವ್ಯವಸ್ಥೆಯಲ್ಲಿ ಕೆಲ ಸಂಪ್ರದಾಯ ಆಚರಣೆಗಳಲ್ಲಿ ವ್ಯತ್ಯಾಸವಾದರೂ ಧಾರ್ಮಿಕ ನಿಲುವು ಬದಲಾಗದು ಎಂದರು. ಚನ್ನಪ್ಪ ಕುನ್ನೂರ ಕಾಲೇಜ ಪ್ರಾಚಾರ್ಯ ಡಾ.ನಾಗರಾಜ ದ್ಯಾಮನಕೊಪ್ಪ ಮಾತನಾಡಿದರು. ವಿರಕ್ತಮಠ ಸಂಗನಬಸವ ಮಹಾಸ್ವಾಮಿಗಳು ಸಾನಿದ್ಯ ವಹಿಸಿದ್ದರು. ಕಲಾ ಸಂಸ್ಥೆಯ ಅಧ್ಯಕ್ಷ ಪಕ್ಕೀರೇಶ ಮಾಸ್ತರ ಕೊಂಡಾಯಿ, ಕರ್ನಾಟಕ ಜಾನಪದ ಪರಿಷತ್ತು ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ರಾಮಚಂದ್ರಪ್ಪ ವೀರಪ್ಪ ಅರ್ಕಸಾಲಿ, ವಿರೂಪಾಕ್ಷಪ್ಪ ಬಗಾಡೆ, ಶೇಕಪ್ಪ ಜೋಳದ, ಶಿವಾನಂದ ಮ್ಯಾಗೇರಿ, ಶಿವಾನಂದ ಹೊಸಮನಿ, ಶಂಕರ್ ಅರ್ಕಸಾಲಿ, ಬಸವರಾಜ ಶಿಗ್ಗಾಂವಿ, ರಮೇಶ ಸಾತಣ್ಣವರ, ಮಲ್ಲಿಕಾರ್ಜುನ ಗೊಬ್ಬರಗುಂಪಿ, ಚಂದ್ರಶೇಖರ ಕಮಡೋಳ್ಳಿ, ವಲಮಪ್ಪ ಸೊರಟೂರ, ವಿಜಯಲಕ್ಷ್ಮಿ ಹೆಸರೂರ, ಸುಮಂಗಲಾ ಹೆಸರೂರ,ಅನಿತಾ ಗೊಬ್ಬರಗುಂಪಿ, ಎಸ್.ಬಿ.ಅಯ್ಯಣ್ಣವರ, ಚಿನ್ನಪ್ಪ ಕುಂದಗೋಳ, ನಾಗರಾಜ ಶಿಂಧೆ, ಬಿ.ಎಚ್. ಸೋಮನಕಟ್ಟಿ, ಎಸ್.ಎನ್.ಮುಗಳಿ, ಬಿ.ಎಂ ಹಳೆಮನಿ ಇದ್ದರು. ವಿದ್ಯಾರ್ಥಿಗಳಿಂದ ಗಾನ ಲಹರಿ ಕಾರ್ಯಕ್ರಮ ಜರುಗಿತು.