ಪೊನ್ನಿಯಿನ್ ಸೆಲ್ವನ್' ನಿರ್ಮಾಪಕರ ಜೊತೆ ಕಿಚ್ಚನ ಚಿತ್ರ!

ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಬಹುಕೋಟಿ ರೂಪಾಯಿ ಬಂಡವಾಳ ಸುರಿದು ಹಲವು ಭಾಷೆಗಳಲ್ಲಿ ಸಿನಿಮಾವನ್ನು ಬಿಡುಗಡೆ ಮಾಡುತ್ತಿವೆ. ಇತ್ತೀಚೆಗೆ ತಮಿಳುನಲ್ಲಿ ‘ಪೊನ್ನಿಯಿನ್ ಸೆಲ್ವನ್’ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಯಿತು. ಆ ಚಿತ್ರದ ನಿರ್ಮಾಪಕರ ಜೊತೆ ಕಿಚ್ಚಸುದೀಪ್ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಕೇಳಿಬಂದಿದೆ. ತಮಿಳಿನಲ್ಲಿ ‘ಲೈಕಾ ಪ್ರೊಡಕ್ಷನ್ಸ್’ ಸಂಸ್ಥೆ ಸಾಕಷ್ಟು ಖ್ಯಾತಿ ಹೊಂದಿದೆ. 2023ರ ಜನವರಿಯಲ್ಲಿ ಈ ಚಿತ್ರ ಸೆಟ್ಟೇರುವ ನಿರೀಕ್ಷೆ ಇದೆ ಎನ್ನಲಾಗಿದೆ.