ಅನಾರೋಗ್ಯದಿಂದ ಬಾಲ ನಟಿ ಬಲಿ, ವೈದ್ಯರ ನಿರ್ಲಕ್ಷ್ಯ ಆರೋಪ

ಅನಾರೋಗ್ಯದಿಂದ ಬಾಲ ನಟಿ ಬಲಿ, ವೈದ್ಯರ ನಿರ್ಲಕ್ಷ್ಯ ಆರೋಪ

ಬೆಂಗಳೂರು : ವಾಂತಿ ಬೇಧಿ ಆಗಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲ ನಟಿಯೊಬ್ಬಳು ಸೂಕ್ತ ಚಿಕಿತ್ಸೆ ಸಕಾಲದಲ್ಲಿ ಸಿಗದೆ ಮೃತಪಟ್ಟ ಘಟನೆ ನಡೆದಿದೆ.

ಸಿಂಚನ (15) ಮೃತ ಬಾಲಕಿ. ಹತ್ತನೆ ತರಗತಿ ಮುಗಿಸಿ ಕನ್ನಡ ಚಿತ್ರರಂಗದಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಆಗಿ ಈಕೆ ಕೆಲಸ ಮಾಡಿಕೊಂಡಿದ್ದಳು.

ಅನಾರೋಗ್ಯ ಹಿನ್ನೆಲೆಯಿಂದ ಎಸ್ಕೆ ಹೆಲ್ತ್ ಕೇರ್ ಎಂಬ ಆಸ್ಪತ್ರೆಗೆ ಈಕೆಯನ್ನು ಕುಟುಂಬಸ್ಥರು ಸೇರಿಸಿದ್ದರು. ನಿನ್ನೆ ರಾತ್ರಿ ವೇಳೆ ಅನಾರೋಗ್ಯಕ್ಕೊಳಗಾಗಿದ್ದ ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬರುವಾಗಲೇ ಈಕೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಹೇಳಿದ್ದರು.

ಆದರೆ ಚಿಕಿತ್ಸೆ ಕೊಡಿ ಎಂದು ಕುಟುಂಬಸ್ಥರು ಬೇಡಿಕೊಂಡರೂ ವೈದ್ಯರು ಕೊಟ್ಟಿಲ್ಲ ಎಂದು ಬಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.