ರೈತ ಸಂಘಟನೆಯಿಂದ ವಿಜಯೋತ್ಸವ... |Dharwad|
ರೈತ ಸಂಘಟನೆ ದಿಟ್ಟತನದ ಹೋರಟಕ್ಕೆ ಕೊನೆಗೂ ಸರ್ವಾಧಿಕಾರಿ ಕೇಂದ್ರ ಸರಕಾರ ಕಾಯ್ದೆ ಹಿಂಪಡೆದಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಕಾರರು ಧಾರವಾಡದಲ್ಲಿ ವಿಜಯೋತ್ಸವ ಆಚರಣೆ ನಡೆಸಿದ್ರು. ಅನ್ನದಾತರಿಗೆ ಸಿಕ್ಕ ಸಂಪೂರ್ಣ ಜಯವಾಗಿದೆ ಎಂದು ಧಾರವಾಡದ ಕಲಾಭವನ ಎದುರುಗಡೆ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಜುಬ್ಲಿ ವೃತದಲ್ಲಿ ರೈತ ಸಂಘಟನೆಕಾರರು ಒಬ್ಬರಿಗೊಬ್ಬರು ಸಿಹಿ ತಿನ್ನಿಸುವ ಮೂಲಕ ವಿಜಯೋತ್ಸವ ಆಚರಿಸಿದ್ರು. ಇನ್ನು 380 ದಿನಗಳಿಂದ ನಡೆಯುತ್ತಿದ್ದ ರೈತ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಈ ಹಿನ್ನೆಲೆಯಲ್ಲಿ ಚಾರಿತ್ರಿಕ ರೈತ ಹೋರಾಟದ ವಿಜಯೋತ್ಸವ ಆಚರಿಸಲು ಸಂಯುಕ್ತ ಹೋರಾಟ ಕರ್ನಾಟಕದ ಎಲ್ಲ ಸಂಘಟನೆಗಳು ನಿರ್ಣಯಿಸಿದ ಬೆನ್ನಲ್ಲೇ ನಗರದ ಜುಬ್ಲಿ ಸರ್ಕಲ್ ಬಳಿ ಹೋರಾಟಗಾರರು ವಿಜಯೋತ್ಸವ ನಡೆಸಿದ್ರು...