ಪಕ್ಷದ ಅಭ್ಯರ್ಥಿಗಳ ವಿರುದ್ಧ ಸೆಡ್ಡು; 28 ಬಂಡುಕೋರರು ಕಾಂಗ್ರೆಸ್‌ನಿಂದ ಉಚ್ಛಾಟನೆ

ಪಕ್ಷದ ಅಭ್ಯರ್ಥಿಗಳ ವಿರುದ್ಧ ಸೆಡ್ಡು; 28 ಬಂಡುಕೋರರು ಕಾಂಗ್ರೆಸ್‌ನಿಂದ ಉಚ್ಛಾಟನೆ

ಪಕ್ಷದ ಅಭ್ಯರ್ಥಿಗಳ ವಿರುದ್ಧ ಸೆಡ್ಡು; 28 ಬಂಡುಕೋರರು ಕಾಂಗ್ರೆಸ್‌ನಿಂದ ಉಚ್ಛಾಟನೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ವಿರುದ್ದ ಸೆಡ್ಡು ಹೊಡೆದು ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿರುವ ಪಕ್ಷದ ಸದಸ್ಯರನ್ನು 6 ತಿಂಗಳ ಕಾಲ ಉಚ್ಚಾಟನೆ ಮಾಡಿ ಕೆಪಿಸಿಸಿ ತಿಳಿಸಿದೆ.
ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಬಂಡಾಯವಾಗಿ ಸ್ಪರ್ಧಿಸುವ ಮೂಲಕ ಪಕ್ಷದ ನಿಯಮಗಳನ್ನು ಉಲ್ಲಂಘಿಸಿದ ೨೮ ಅಭ್ಯರ್ಥಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಉಚ್ಚಾಟನೆ ಮಾಡಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹು-ಧಾ ಪಶ್ಚಿಮ ಕ್ಷೇತ್ರದ ಮಾಧುರಿ ಇರಾಣಿ, ವಾಹೀದಾ ದಿವಾನ್ ಬಳ್ಳಾರಿ, ಪರಶುರಾಮ ಮಾನೆ, ಚಿದಾನಂದ ಶಿಸನಳ್ಳಿ, ಮಹಾವೀರ ಶಿವಣ್ಣವರ, ಭಾರತಿ ಡೊಳ್ಳಿನ, ಶಹಜಹಾನಸಾಬ ಸಾವಂತನವರ, ಕಾಶೀಂಸಾಬ ನನ್ನೇಸಾಬ ದರಗಾದ, ಸೆಂಟ್ರಲ್ ಕ್ಷೇತ್ರದ ಬಸವರಾಜ ಕಳಕರೆಡ್ಡಿ, ಸಮೀರಖಾನ, ಜೀಬಾ ಮಕಬೂಲ ಕುಸನೂರ, ಲಕ್ಷ್ಮೀ ಬಾರಕೇರ, ಸುಶೀಲಾ ಗುಡಿಹಾಳ, ಚೇತನ ಹಿರೇಕೆರೂರ, ಚಂದ್ರಿಕಾ ವೆಂಕಟೇಶ ಮೇಸ್ತ್ರಿ, ನೇಹಾ ಬೇಲ್ಡೋಣಿ, ಸುಧಾ ಮನಿಕುಂಟ್ಲ, ಸ್ವಾತಿ ಮಣಿಕುಂಟ್ಲ,
ಪೂರ್ವ ಕ್ಷೇತ್ರದ ಆಸೀಪ್ ಇಕ್ಬಾಲ ಬಳ್ಳಾರಿ, ಅಹ್ಮದಸಾಬ ಯಾದಗಿರಿ, ಗಣೇಶ ಟಗರಗುಂಟಿ ರಾಬಿಯಾಬಾನು ಅಮಟೂರ, ಹೇಮಾ ಧರ್ಮರಾಜ ಸಾತಪತಿ, ಶೋಭಾ ಕಮತರ, ಶಮಾ ಮನಿಯಾರ, ಮೋಹನಾಂಬಾ ಯಮನೂರ ಗುಡಿಹಾಳ, ಅಕ್ಷತಾ ಮೋಹನ ಅಸುಂಡಿ ಅಲ್ಲದೇ
ಧಾರವಾಡ ಗ್ರಾಮೀಣ ಕ್ಷೇತ್ರದ ಜಯಶ್ರೀ ನಾಯಕವಾಡ, ರಾಜಶೇಖರಯ್ಯ ಕಂತಿಮಠ, ಸೂರಜ ಪುಡಕಲಕಟ್ಟಿ, ಶಾಹೀನ ಯಾಶೀನ ಹಾವೇರಿಪೇಟ್, ಮಂಜುನಾಥ ಕದಂ, ಪ್ರಕಾಶ ಘಾಟಗೆ, ಶಾಂತವ್ವ ಬೂದಿಹಾಳ ಎಂಬುವರನ್ನು ಉಚ್ಚಾಟನೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.