ಸರ್ಕಾರ ಅವಕಾಶ ಕೊಡಲಿ ಬಿಡಲಿ ಗಣೇಶೋತ್ಸವ ಆಚರಿಸ್ತೀವಿ, ತಾಕತ್​ ಇದ್ರೆ ತಡೆಯಲಿ: ಪ್ರಮೋದ್​ ಮುತಾಲಿಕ್​

ಸರ್ಕಾರ ಅವಕಾಶ ಕೊಡಲಿ ಬಿಡಲಿ ಗಣೇಶೋತ್ಸವ ಆಚರಿಸ್ತೀವಿ, ತಾಕತ್​ ಇದ್ರೆ ತಡೆಯಲಿ: ಪ್ರಮೋದ್​ ಮುತಾಲಿಕ್​

ಬೆಂಗಳೂರು: ಸರ್ಕಾರ ಅವಕಾಶ ನೀಡಲಿ ಬಿಡಲಿ ನಾವು ಗಣೇಶೋತ್ಸವ ಆಚರಿಸ್ತೀವಿ. ಸರ್ಕಾರ ಅದ್ಹೇಗೆ ತಡೆಯುತ್ತೆ ಅಂತ ನಾವೂ ನೋಡ್ತೀವಿ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್​ ಮುತಾಲಿಕ್​ ಸವಾಲು ಹಾಕಿದ್ದಾರೆ.

ದಿಗ್ವಿಜಯ ನ್ಯೂಸ್​ ಜತೆ ಮಾತನಾಡಿದ ಪ್ರಮೋದ್​ ಮುತಾಲಿಕ್​, ಗಣೇಶ ಹಬ್ಬಕ್ಕೆ ಇನ್ನು 10 ದಿನ ಇದೆ. ಇಷ್ಟೊತ್ತಿಗೆ ಸಾರ್ವಜನಿಕ ಗಣೇಶೋತ್ಸವಕ್ಕೆ ತಯಾರಿ ಆಗಬೇಕಿತ್ತು. ಆದರೆ, ಸರ್ಕಾರ ಇನ್ನೂ ಗೈಡ್​ಲೈನ್ಸ್ ಬಿಡುಗಡೆ ಮಾಡಿಲ್ಲ. ರಾಜಕೀಯ ಸಭೆ, ಸಮಾರಂಭಗಳಿಗೆ ಇರದ ನಿರ್ಬಂಧ ಗಣೇಶ ಹಬ್ಬಕ್ಕೆ ಏಕೆ? ಗಣೇಶೋತ್ಸವ ಆಚರಿಸಿದ್ರೆ ಮಾತ್ರ ಕರೊನಾ ಹರಡುತ್ತಾ? ರಾಜ್ಯದಲ್ಲಿ ಪಾಲಿಕೆ ಚುನಾವಣೆ ನಡೆಯುತ್ತಿದೆ. ಸಾವಿರಾರು ಜನ ಮೆರವಣಿಗೆ ಮಾಡ್ತಿದ್ದಾರೆ. ಪಬ್, ಕ್ಲಬ್​, ಶಾಲೆ, ಜನಾದೇಶಯಾತ್ರೆ… ಇದ್ಯಾವುದೂ ಸರ್ಕಾರಕ್ಕೆ ಕಾಣ್ತಿಲ್ವಾ? ಗಣೇಶೋತ್ಸವದ ಮೇಲೆ ಯಾಕೆ ಕಣ್ಣಿಟ್ಟಿದ್ದಾರೆ? ಎಂದು ಆಕ್ರೋಶ ಹೊರಹಾಕಿದರು.

ಕರೊನಾ ಹಿನ್ನೆಲೆ ಗಣೇಶೋತ್ಸವದಲ್ಲಿ ಮೆರವಣಿಗೆ ಇರಲ್ಲ, ಮನರಂಜನಾ ಕಾರ್ಯಕ್ರಮವೂ ಇರಲ್ಲ. ಆದರೆ, ಕೋವಿಡ್​ ನಿಯಮದ ಪ್ರಕಾರ ಗಣೇಶೋತ್ಸವ ಮಾಡಿ ಎಂದು ಎಲ್ಲರಿಗೂ ನಾವು ಸಲಹೆ ಕೊಟ್ಟಿದ್ದೇವೆ. ಇಂದು ಸಂಜೆ ನಡೆಯುವ ತಜ್ಞರ ಸಭೆ ಬಳಿಕ ಸರ್ಕಾರ ಅಂತಿಮ ತೀರ್ಮಾನ ಪ್ರಕಟಿಸಲಿ. ಒಂದೊಂದು ನಿಜ ಸರ್ಕಾರ ಅವಕಾಶ ನೀಡಲಿ ಬಿಡಲಿ ನಾವು ಗಣೇಶೋತ್ಸವ ಆಚರಿಸ್ತೀವಿ, ಹೇಗೆ ತಡೆಯುತ್ತೆ ಅಂತ ನಾವೂ ನೋಡ್ತೀವಿ ಎಂದು ಪ್ರಮೋದ್​ ಮುತಾಲಿಕ್​ ಎಚ್ಚರಿಸಿದ್ದಾರೆ.