23 ವರ್ಷಕ್ಕೆ ಕೋಟ್ಯಾಧಿಪತಿಯಾದ ಶುಭ್ಮನ್: ರನ್ ಜೊತೆ ಏರುತ್ತಲೇ ಇದೆ ಗಿಲ್ ವಾರ್ಷಿಕ ಆದಾಯ!

ಟೀಂ ಇಂಡಿಯಾ ಕ್ರಿಕೆಟಿಗ ಶುಭ್ಮನ್ ಗಿಲ್ ದ್ವಿಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಬುಧವಾರ ಹೈದರಾಬಾದ್‌ನಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದರು.
ದ ವಿರುದ್ಧ 210 ರನ್ ಗಳಿಸಿದ್ದ ಇಶಾನ್ ಕಿಶನ್ ಅವರನ್ನು ಹಿಂದಿಕ್ಕಿದ್ದಾರೆ. ಗಿಲ್ 2018 ರ ICC U19 ವಿಶ್ವಕಪ್‌ನಲ್ಲಿ 104.50 ರ ಸರಾಸರಿಯಲ್ಲಿ 418 ರನ್ ಬಾರಿಸಿದ ಖ್ಯಾತಿ ಹೊಂದಿದ್ದಾರೆ.
ಇನ್ನು ಈ 23 ವರ್ಷ ಹರೆಯದ ಸ್ಟಾರ್ ಆಟಗಾರನ ವಾರ್ಷಿಕ ಆದಾಯ ಎಷ್ಟು ಎಂದು ನಿಮಗೆ ತಿಳಿದಿದೆಯೇ? ವರದಿಗಳ ಪ್ರಕಾರ ಗಿಲ್ ಅವರ ನಿವ್ವಳ ಮೌಲ್ಯ ಸುಮಾರು 31 ಕೋಟಿ ಎಂದು ಅಂದಾಜಿಸಲಾಗಿದೆ. ರೇಂಜ್ ರೋವರ್ ಎಸ್‌ಯುವಿ ಮತ್ತು ಮಹೀಂದ್ರ ಥಾರ್ ವಾಹನಗಳನ್ನು ಸಹ ಹೊಂದಿದ್ದಾರೆ. ಐಪಿಎಲ್ 2022 ರ ಹರಾಜಿನ ಮುನ್ನ ಡ್ರಾಫ್ಟ್‌ನಲ್ಲಿ ಗಿಲ್ ಅವರನ್ನು ಗುಜರಾತ್ ಟೈಟಾನ್ಸ್ 8 ಕೋಟಿ ರೂ.ಗೆ ಆಯ್ಕೆ ಮಾಡಿತ್ತು.ಒಪ್ಪಂದದ ಪ್ರಕಾರ, ಗಿಲ್ ಗ್ರೇಡ್ ಸಿ ಒಪ್ಪಂದದ ಅಡಿಯಲ್ಲಿ ವರ್ಷಕ್ಕೆ ರೂ. 1 ಕೋಟಿ ಪಡೆಯುತ್ತಾರೆ. ಮಾಸಿಕ ಆದಾಯವು ಸುಮಾರು 10-12 ಕೋಟಿಗಳಷ್ಟಿದೆ (ತೆರಿಗೆ ಕಡಿತದ ಮೊದಲು). ಇದು ಅನುಮೋದನೆಗಳು ಮತ್ತು IPL ಸಂಬಳದ ಎಲ್ಲಾ ಗಳಿಕೆಗಳನ್ನು ಒಳಗೊಂಡಿದೆ.