ಜ.28ರಂದು ಈ ಜನರ ಖಾತೆಗೆ ಬೀಳಲಿದೆ 2000 ರೂ: ಆದರೆ ಹಣ ಸಿಗೋದು ಈ ನಿಯಮ ಪಾಲಿಸಿದ್ದರೆ ಮಾತ್ರ!

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 13 ನೇ ಕಂತಿಗಾಗಿ ಕಾಯುತ್ತಿರುವ ಕೋಟಿಗಟ್ಟಲೆ ರೈತರಿಗೆ ಮಹತ್ವದ ಸುದ್ದಿಯಿದೆ. ಈ ಸಂಬಂಧ ಟ್ವೀಟ್ ಮೂಲಕ ಸಚಿವಾಲಯ ಸೂಚನೆಯೊಂದನ್ನು ನೀಡಿದೆ.
ಪಿಎಂ ಕಿಸಾನ್ ಯೋಜನೆಯಡಿ ಫಲಾನುಭವಿಗಳಿಗೆ ಇ-ಕೆವೈಸಿ ಪರಿಶೀಲನೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ರೈತರಿಗೆ ತಿಳಿಸಲಾಗಿದೆ ಎಂದು ಬಿಹಾರ ಸರ್ಕಾರದ ಕೃಷಿ ಇಲಾಖೆ ಟ್ವೀಟ್ನಲ್ಲಿ ಬರೆದಿದೆ. ಇನ್ನೂ 16.74 ಲಕ್ಷ ಫಲಾನುಭವಿಗಳು ಪರಿಶೀಲನೆ ನಡೆಸಿಲ್ಲ ಎಂದು ಬಿಹಾರ ಸರ್ಕಾರ ತಿಳಿಸಿದೆ. ಈ ಕೆಲಸ ಮಾಡಲು ಡಿಬಿಟಿ ಕೃಷಿ ಇಲಾಖೆಯಿಂದ ಫಲಾನುಭವಿಗಳಿಗೆ ಎಸ್ಎಂಎಸ್ ಕಳುಹಿಸಲಾಗಿದೆ.
ಹಣ ಯಾವಾಗ ಬರಬಹುದು:
ಮಾಧ್ಯಮ ವರದಿಗಳ ಪ್ರಕಾರ, ಸರ್ಕಾರವು ರೈತರ ಖಾತೆಗಳಿಗೆ ಇಂದು ಅಂದರೆ ಜನವರಿ 23 ಅಥವಾ ಜನವರಿ 26 ರಂದು ಹಣವನ್ನು ವರ್ಗಾಯಿಸಬಹುದು. ಸದ್ಯ ಸರ್ಕಾರದಿಂದ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.
ನಿಮ್ಮ ಕಂತು ಸ್ಥಿತಿಯನ್ನು ಹೀಗೆ ಪರಿಶೀಲಿಸಿ:
ಕಂತಿನ ಸ್ಥಿತಿಯನ್ನು ನೋಡಲು, ನೀವು PM ಕಿಸಾನ್ ವೆಬ್ಸೈಟ್ಗೆ ಹೋಗಿ
ಈಗ ರೈತರ ಕಾರ್ನರ್ ಕ್ಲಿಕ್ ಮಾಡಿ
ಈಗ Beneficiary Status ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಈಗ ಹೊಸ ಪುಟ ತೆರೆದುಕೊಳ್ಳುತ್ತದೆ.
ಇಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ಇದರ ನಂತರ ಕಂತಿನ ಸ್ಥಿತಿಯನ್ನು ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುತ್ತೀರಿ.
ಗೆ ಸಂಬಂಧಿಸಿದಂತೆ ನಿಮಗೆ ಯಾವುದೇ ರೀತಿಯ ಸಮಸ್ಯೆಗಳಿದ್ದರೆ, ನೀವು ಸಹಾಯವಾಣಿ ಸಂಖ್ಯೆ 155261 ಅಥವಾ 1800115526 ಅಥವಾ ಈ ಸಂಖ್ಯೆ 011-23381092 ಅನ್ನು ಸಂಪರ್ಕಿಸಬಹುದು. ಇದಲ್ಲದೆ pmkisan-ict@gov.in ಇಮೇಲ್ ಐಡಿಗೆ ಮೇಲ್ ಮಾಡುವ ಮೂಲಕ ನಿಮ್ಮ ಸಮಸ್ಯೆಯನ್ನು ನೀವು ಹೇಳಬಹುದು.