ಮಾರ್ಕೆಟ್ ಫ್ಲೈ ಓವರ್‌ನಿಂದ ಹಣ ಎಸೆದು, ಟ್ರಾಫಿಕ್ ಜಾಮ್ ಮಾಡಿದ್ದು ಯಾಕೆ ಗೊತ್ತೆ? ಪೊಲೀಸರು ಹೇಳಿದ್ದು ಹೀಗೆ

ಮಾರ್ಕೆಟ್ ಫ್ಲೈ ಓವರ್‌ನಿಂದ ಹಣ ಎಸೆದು, ಟ್ರಾಫಿಕ್ ಜಾಮ್ ಮಾಡಿದ್ದು ಯಾಕೆ ಗೊತ್ತೆ? ಪೊಲೀಸರು ಹೇಳಿದ್ದು ಹೀಗೆ

ಬೆಂಗಳೂರು, ಜನವರಿ. 25: ಮಂಗಳವಾರ ಬೆಂಗಳೂರು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದು ಕೆ.ಆರ್.ಮಾರುಕಟ್ಟೆಯ ಫ್ಲೈ ಓವರ್‌ನಲ್ಲಿ ಸುರಿದ ಹಣದ ಮಳೆಯಿಂದಾಗಿ. ಜನರು ಹಣವನ್ನು ತೆಗೆದುಕೊಳ್ಳಲು ಸಂಚಾರ ದಟ್ಟಣೆ ಉಂಟು ಮಾಡಿದ ಕಾರಣದಿಂದಾಗಿ.

ಹೌದು, ಕೆ.ಆರ್.ಮಾರುಕಟ್ಟೆಯ ಫ್ಲೈ ಓವರ್‌ನಿಂದ ಮಂಗಳವಾರದಂದು 30 ವರ್ಷದ ವ್ಯಕ್ತಿಯೊಬ್ಬ ಹಣದ ನೋಟುಗಳನ್ನು ಎಸೆದು ಸಿಲಿಕಾನ್ ಸಿಟಿಯ ಪ್ರಮುಖ ಸಗಟು ಮಾರುಕಟ್ಟೆಯಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿದ್ದರು.

ಜನರು ನೋಟುಗಳನ್ನು ತೆಗೆದುಕೊಳ್ಳಲು ಮುಗಿಬಿದ್ದ ಕಾರಣ ಸಂಚಾರ ದಟ್ಟಣೆ ಉಂಟಾಗಿತ್ತು. ಈಗ ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪದ ಮೇಲೆ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೀಗೆ ಕೆ.ಆರ್.ಮಾರುಕಟ್ಟೆಯ ಮೇಲ್ಸೇತುವೆಯಿಂದ ಹಣವನ್ನು ಎಸೆದ ವ್ಯಕ್ತಿಯನ್ನು ಅರುಣ್ ಎಂದು ಗುರುತಿಸಲಾಗಿದೆ. ಈಗ ಹಾಗೆ ಮಾಡಲು ಕಾರಣವೆನು ಎಂದು ಪೊಳಿಸರು ತಿಳಿಸುತ್ತಾರೆ ಓದಿ.


ಪ್ರಚಾರಕ್ಕಾಗಿ ಇಷ್ಟು ದೊಡ್ಡ ಟ್ರಾಫಿಕ್ ಜಾಮ್ ಉಂಟುಮಾಡಿದರೆ?

ತನ್ನನ್ನು ತಾನು ಈವೆಂಟ್ ಮ್ಯಾನೇಜರ್ ಎಂದು ಹೇಳಿಕೊಳ್ಳಲು ಪ್ರಯತ್ನಿಸುತ್ತಿರುವ ಆರೋಪಿ ಅರುಣ್ ಪ್ರಚಾರಕ್ಕಾಗಿ ಇಂತಹ ಕೆಲಸ ಮಾಡಿರಬಹುದು ಎಂದು ಪೊಲೀಸರು ಹೇಳಿದ್ದಾರೆ.