ಕೊನೆಗೂ ಯಡಿಯೂರಪ್ಪ ಮನವೊಲಿಕೆಯಲ್ಲಿ ಬಿಜೆಪಿ ನಾಯಕರು ಸಕ್ಸಸ್: ನಾಳೆ ಕೊಪ್ಪಳದ ಕಾರ್ಯಕ್ರಮದಲ್ಲಿ ಭಾಗಿ

ಕೊನೆಗೂ ಯಡಿಯೂರಪ್ಪ ಮನವೊಲಿಕೆಯಲ್ಲಿ ಬಿಜೆಪಿ ನಾಯಕರು ಸಕ್ಸಸ್: ನಾಳೆ ಕೊಪ್ಪಳದ ಕಾರ್ಯಕ್ರಮದಲ್ಲಿ ಭಾಗಿ

ಬೆಂಗಳೂರು: ಬಿಜೆಪಿಯಿಂದ ಕೊಪ್ಪಳದಲ್ಲಿ ಕಚೇರಿ ಉದ್ಘಾಟನೆ ಕಾರ್ಯಕ್ರಮ ಸೇರಿದಂತೆ ವಿವಿಧ ಪ್ರೋಗ್ರಾಂಗಳಿಂದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೊರಗಿಡಲಾಗಿತ್ತು. ಅದರಲ್ಲೂ ಕೊಪ್ಪಳದ ಬಿಜೆಪಿ ಕಚೇರಿಯ ನಾಳಿನ ಉದ್ಘಾಟನಾ ಕಾರ್ಯಕ್ರಮದ ಪತ್ರಿಕಾ ಪ್ರಕಟಣಯಲ್ಲಿ ಯಡಿಯೂರಪ್ಪ ಅವರ ಪೋಟೋವನ್ನೇ ಕೈಬಿಡಲಾಗಿತ್ತು.

ಇದರಿಂದ ಬಿಎಸ್ ವೈ ಮುನಿಸಿಕೊಂಡಿದ್ದಾರೆ ಎನ್ನಲಾಗಿತ್ತು. ಆದ್ರೇ ಇದೀಗ ಅವರ ಮನವೊಲಿಕೆಯಲ್ಲಿ ಬಿಜೆಪಿ ನಾಯಕರು ಸಕ್ಸಸ್ ಆಗಿದ್ದಾರೆ. ನಾಳಿನ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಭಾಗಿಯಾಗಲಿದ್ದಾರೆ.