'ನನ್ನನ್ನು ವೇಶ್ಯಾವಾಟಿಕೆಗೂ ತಳ್ಳಲು ಯತ್ನಿಸಿದ್ದರು' : ನಟಿ ಅಭಿನಯಾ ವಿರುದ್ಧ ಅತ್ತಿಗೆ ಲಕ್ಷ್ಮೀದೇವಿ ಆರೋಪ

'ನನ್ನನ್ನು ವೇಶ್ಯಾವಾಟಿಕೆಗೂ ತಳ್ಳಲು ಯತ್ನಿಸಿದ್ದರು' : ನಟಿ ಅಭಿನಯಾ ವಿರುದ್ಧ ಅತ್ತಿಗೆ ಲಕ್ಷ್ಮೀದೇವಿ ಆರೋಪ

ಬೆಂಗಳೂರು: ವರದಕ್ಷಿಣೆ ಕಿರುಕುಳ ಆರೋಪದಲ್ಲಿ ಸ್ಯಾಂಡಲ್ ವುಡ್ ನಟಿ ಅಭಿನಯಾಗೆ ಎರಡು ವರ್ಷದ ಜೈಲು ಶಿಕ್ಷೆ ನೀಡಿ ಹೈಕೋರ್ಟ್ ಆದೇಶವನ್ನು ಹೊರಡಿಸಿದೆ.

ಅಭಿನಯ ಅಣ್ಣನ ಪತ್ನಿ ಲಕ್ಷ್ಮೀದೇವಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪವಿದ್ದು, ಕೋರ್ಟ್ ಶಿಕ್ಷೆ ನೀಡಿದೆ.

ಈ ಬಗ್ಗೆ ನಟಿ ಅಭಿನಯ ಅತ್ತಿಗೆ ಲಕ್ಷ್ಮೀದೇವಿ ಪ್ರತಿಕ್ರಿಯೆ ನೀಡಿದ್ದು, ನನಗೆ ಬಹಳ ಖುಷಿ ಆಗುತ್ತಿದೆ. ಇನ್ನೊಂದು ಕಡೆ ದುಖಃ ಆಗುತ್ತಿದೆ. ತನ್ನ ಮಗು, ತನ್ನ ಅಣ್ಣನ ಮಗು ಎಂದು ಯಾರೂ ಕೂಡ ನೋಡಲು ಬಂದಿಲ್ಲ ಎಂದು ಹೇಳಿದ್ದಾರೆ. ಈ ಹಿಂದೆ ನನ್ನನ್ನು ವೇಶ್ಯಾವಾಟಿಕೆಗೆ ತಳ್ಳಲು ಕುಟುಂಬ ಯತ್ನಿಸಿತ್ತು, ನಾನು ಅದ್ಯಾವುದಕ್ಕೂ ಜಗ್ಗಲಿಲ್ಲ. ನಂತರ ನನಗೆ ಟಾರ್ಚರ್ ಕೊಡಲು ಪ್ರಯತ್ನ ಮಾಡಿದರು. ನಾನು 20 ವರ್ಷ ಬಹಳ ಕಷ್ಟಪಟ್ಟಿದ್ದೆ, ಅದಕ್ಕೆ ತಕ್ಷ ಶಿಕ್ಷೆಯಾಗಿದೆ ಎಂದಿದ್ದಾರೆ

ಹೈಕೋರ್ಟ್ ಹೈಕೋರ್ಟ್ ನ್ಯಾ.ಹೆಚ್.ಬಿ. ಪ್ರಭಾಕರ್ ಶಾಸ್ತ್ತಿ ಅವರ ಏಕಸದಸ್ಯ ಪೀಠ ವರದಕ್ಷಿಣೆ ನೀಡುವಂತೆ ಪೋಷಕರ ಜೊತೆ ಸೇರಿ ಅತ್ತಿಗೆಗೆ ಕಿರುಕುಳ ನೀಡಿದ ಅರೋಪದಲ್ಲಿ ಈ ಆದೇಶವನ್ನು ಹೊರಡಿಸಿದೆ. ವರದಕ್ಷಿಣೆ ಕಿರುಕುಳ (Dowry Case) ಆರೋಪದ ಅಡಿಯಲ್ಲಿ ಜಯಮ್ಮಗೆ 5 ವರ್ಷ ಶಿಕ್ಷೆ ಹಾಗೂ ಅಭಿನಯಾ ಸಹೋದರ ಚೆಲುವರಾಜ್ಗೆ 2 ವರ್ಷ ಶಿಕ್ಷೆ ನೀಡಲಾಗಿದೆ.