ಚುನಾವಣೆಗೂ ಮುನ್ನವೇ ಭರ್ಜರಿ ಭೇಟೆ : ಚುನಾವಣಾ ಆಯೋಗದಿಂದ 9.29 ಕೋಟಿ ರೂ. ಮೌಲ್ಯದ ವಸ್ತುಗಳು ಜಪ್ತಿ

ಚುನಾವಣೆಗೂ ಮುನ್ನವೇ ಭರ್ಜರಿ ಭೇಟೆ : ಚುನಾವಣಾ ಆಯೋಗದಿಂದ 9.29 ಕೋಟಿ ರೂ. ಮೌಲ್ಯದ ವಸ್ತುಗಳು ಜಪ್ತಿ

ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನು ದಿನಾಂಕ ಘೋಷಣೆಯಾಗಬೇಕಾಗಿದ್ದು, ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ಚುನಾವಣೆ ಆಯೋಗ ರಾಜ್ಯದಲ್ಲಿ ರಾಜಕೀಯ ಪಕ್ಷಗಳ ಆಮೀಷಗಳ ಕಡಿವಾಣ ಹಾಕಲು ಮುಂದಾಗಿದೆ.

ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಗೂ ಮುನ್ನವೇ ರಾಜಕೀಯ ಪಕ್ಷಗಳ ನಾಯಕರು ಮತದಾರರಿಗೆ ಹಂಚಲು ತಂದಿದ್ದ ಹಣ, ಹೆಂಡ, ಸೀರೆ ಸೇರಿ ನಾನಾ ಆಮೀಷಗಳನ್ನು ಒಡ್ಡುತ್ತಿದ್ದಾರೆ.

ಇಂತಹ ಆಮಿಷಗಳಿಗೆ ಕಡಿವಾಣ ಹಾಕಲು ಚುನಾವಣಾ ಆಯೋಗ ಕಣಕ್ಕಿಳಿದಿದ್ದು, ಬರೋಬ್ಬರಿ 9.29 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದೆ.

ಚುನಾವಣಾ ಆಯೋಗವು ಈವರೆಗೆ ರಾಜ್ಯದಲ್ಲಿ ಸುಮಾರು 1.21 ಕೋಟಿ ರೂ. ನಗದು ವಶಕ್ಕೆ ಪಡೆದುಕೊಂಡಿದೆ. ಮತದಾರರಿಗೆ ಹಂಚಲು ಸಾಗಾಟ ಮಾಡುತ್ತಿದ್ದ ಸುಮಾರು 2.66 ಕೋಟಿ ಮೌಲ್ಯದ 59,265 ಲೀಟರ್ ಮದ್ಯ, 1.88 ಕೋಟಿ ಮೌಲ್ಯದ ವಿವಿಧ ಮಾಧಕ ವಸ್ತುಗಳು, ಚಿನ್ನ ಬೆಳ್ಳಿ ಸೇರಿದಂತೆ ಒಟ್ಟು 9.29 ಕೋಟಿ ರೂ.ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದೆ.