ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥ ಶ್ರೀಗಳಿಗೆ ಮರನೊತ್ತರವಾಗಿ ದೊರೆತ ಪದ್ಮ ವಿಭೂಷಣ
ರಾಷ್ಟ್ರಪತಿಗಳು ಕೊಟ್ಟಿರುವ ಶ್ರೀ ಪದ್ಮವಿಭೂಷಣ ಪ್ರಶಸ್ತಿಯೊಂದಿಗೆ ಶ್ರೀಗಳವರು ಆಗಮಿಸಿದರು. ಅದರ ಪ್ರಯುಕ್ತ ಶೋಭಾಯಾತ್ರೆಯನ್ನು ನವಂಬರ್ 24ರಿಂದು ಹುಬ್ಬಳ್ಳಿಯ ಬಾಳಿಗ ವೃತ್ತದಿಂದ ದೇಶಪಾಂಡೆ ನಗರದ ಶ್ರೀಕೃಷ್ಣ ಮಠ ದವರೆಗೆ ನಡೆಸಲಾಯಿತು, ನಂತರ ಸಭಾ ಕಾರ್ಯಕ್ರಮ ನಡೆಯಿತು. ಹುಬ್ಬಳ್ಳಿ ಧಾರವಾಡ ಸುತ್ತ ಮುತ್ತಲಿನ ಎಲ್ಲಾ ಹರಿದಾಸ ಬಂಧುಗಳು, ಎಲ್ಲಾ ಅಷ್ಟೋತ್ತರ ಮಂಡಳಿ, ಎಲ್ಲಾ ಭಜನಾ ಮಂಡಳಿ ಸಭ್ಯರು, ಪೇಜಾವರ ಶಿಷ್ಯ ಮಂಡಳಿ, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸದರು. ಶ್ರೀ ಪೇಜಾವರ ಮಠ ಹಾಗೂ ದೇಶಪಾಂಡೆ ನಗರದ ಶ್ರೀ ಕೃಷ್ಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಎಲ್ಲಾ ಸದಸ್ಯರು ಭಾಗಿಯಾಗಿದ್ದರು.