ಮಹಾನಗರ ಪಾಲಿಕೆ; ತೀವ್ರ ಪೈಪೋಟಿಯ ಸೆಂಟ್ರಲ್ ಅಭ್ಯರ್ಥಿಗಳು
Metropolitan policing; Central candidates for fierce competition

ಮಹಾನಗರ ಪಾಲಿಕೆ; ತೀವ್ರ ಪೈಪೋಟಿಯ ಸೆಂಟ್ರಲ್ ಅಭ್ಯರ್ಥಿಗಳು
ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕ್ಷೇತ್ರವಾದ ಹು.ಧಾ. ಸೆಂಟ್ರಲ್ ಕ್ಷೇತ್ರದಲ್ಲಿ ಮಹಾನಗರ ಪಾಲಿಕೆ ಚುನಾವಣೆಗೆ ಅಭ್ಯರ್ಥಿಗಳಾಗಲು ವ್ಯಾಪಕ ಪೈಪೋಟಿ ಇದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ಬೆಳಗಾವಿ ಶಾಸಕಿ ಲಕ್ಷಿö ಹೆಬ್ಬಾಳ್ಕರ ತವರಲ್ಲೇ ನಡೆಯಿತು.
ಮೊನ್ನೆ ಮಯೂರ ರೆಸಾರ್ಟದಲ್ಲಿ ಪೂರ್ವ ಮತ್ತು ಪಶ್ಚಿಮದ ಬಹುತೇಕ ಅಭ್ಯರ್ಥಿಗಳ ಪಟ್ಟಿ ಅಂತಿಮಗೊAಡಿದ್ದರೂ ಒಂದೆಡೆ ಉಣಕಲ್ ಪ್ರದೇಶದಲ್ಲಿ ಬಿಜೆಪಿ ಅವಿರೋಧ ಆಯ್ಕೆಗೆ ಸಾಮ, ಭೇದ, ದಂಡದ ಬೆದರಿಕೆ ತಂತ್ರ ಹಾಗೂ ಹಲವು ಅಭ್ಯರ್ಥಿಗಳ ಮಧ್ಯೆ ತೀವ್ರ ಪೈಪೋಟಿ ಹಿನ್ನೆಲೆಯಲ್ಲಿ ಅಂತಿಮವಾಗಿ ಬೆಳಗಾವಿಯಲ್ಲಿ ನಡೆದು ಪಟ್ಟಿ ಬಹುತೇಕ ಅಂತಿಮಗೊAಡಿದೆ. ಸೆಂಟ್ರಲ್ ವ್ಯಾಪ್ತಿಯ ವಿದ್ಯಾನಗರ ಬ್ಲಾಕ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಹೆಬ್ಬಾಳ್ಕರ ಆವರ ಅಳಿಯ ಆಗಿದ್ದು ಮಹತ್ವ ಪಡೆದಂತಾಗಿದೆ. ಸಭೆಗೆ ಕೇವಲ ಔಪಚಾರಿಕವಾಗಿ ಶಾಸಕಿ ಲಕ್ಷಿö ಭೇಟಿ ನೀಡಿ ತೆರಳಿದ್ದು ಒಟ್ಟಿನಲ್ಲಿ ಸಮರ್ಥರ ಅಲ್ಲದೇ ಪುನಃ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಕಟ್ಟುವ ಪ್ರಾಥಮಿಕ ಯತ್ನಕ್ಕೆ ಮುನ್ನುಡಿ ಬರೆದಂತಾಗಿದೆ.
ಉಸ್ತುವಾರಿಗಳಾದ ಆರ್.ವಿ.ದೇಶಪಾಂಡೆ, ಧ್ರುವನಾರಾಯಣ, ತನ್ವೀರ ಸೇಠ, ಶಿವಾನಂದ ಪಾಟೀಲ ಅಲ್ಲದೇ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸಮ್ಮುಖದಲ್ಲಿ ಮ್ಯಾರಥಾನ್ ಸಭೆ ನಡೆದು ಕೆಲ ತೀವ್ರ ಪೈಪೋಟಿಯಿರುವ ವಾರ್ಡ ಹೊರತುಪಡಿಸಿ ಉಳಿದೆಲ್ಲವುಗಳಿಗೆ ಗ್ರೀನ ಸಿಗ್ನಲ್ ನೀಡಲಾಗಿದೆ.
ಉಭಯ ಅಧ್ಯಕ್ಷರಾದ ಅಲ್ತಾಫ್ ಹಳ್ಳೂರ, ಅನಿಲಕುಮಾರ ಪಾಟೀಲ, ಶಾಸಕ ಶ್ರೀನಿವಾಸ ಮಾನೆ,ಮಾಜಿ ಶಾಸಕ ನಾಗರಾಜ ಛಬ್ಬಿ, ಹಿರಿಯ ಮುಖಂಡ ಪಿ.ಕೆ.ರಾಯನಗೌಡರ, ಸದಾನಂದ ಡಂಗನವರ, ಬ್ಲಾಕ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಸೇರಿದಂತೆ ಮುಂಚೂಣಿ ಘಟಕಗಳ ಅಧ್ಯಕ್ಷರು ಸಭೆಯಲ್ಲಿದ್ದರು.
ಕಳೆದ ೨೦ ವರ್ಷಗಳಲಿ ಸೆಂಟ್ರಲ್ ಕ್ಷೇತ್ರದಲ್ಲಿನ ಬಹುತೇಕರ ಪ್ರಭಾವಿಗಳು ಪಕ್ಷ ತೊರೆದರೂ ತನ್ನದೇ ಕಾಂಗ್ರೆಸ್ ಮತ ಬ್ಯಾಂಕ್ ಹೊಂದಿದ್ದು ಈ ಹಿನ್ನೆಲೆಯಲ್ಲಿ ಎಲ್ಲರ ಅಭಿಪ್ರಾಯ ಆಧರಿಸಿ ಅಲ್ಲದೇ ಹಿರಿತನ ಮತ್ತು ಯುವ ಸಮ್ಮಿಶ್ರವಿರುವಂತೆ ನೋಡಿಕೊಂಡು ಪಟ್ಟಿ ಬಹುತೇಕ ಅಂತಿಮಗೊಳಿಸ ಲಾಗಿದೆ ಎನ್ನಲಾಗಿದೆ.
ಈಗಾಗಲೇ ಮಹಾನಗರಪಾಲಿಕೆಯ ೮೨ ವಾರ್ಡಗಳ ಪೈಕಿ ಸುಮಾರು ೭೦ಕ್ಕೂ ಹೆಚ್ಚು ವಾರ್ಡಗಳಲ್ಲಿ ಕೈ ಅಭ್ಯರ್ಥಿಗಳು ಅಂತಿಮಗೊAಡಿದ್ದು ೨೯,೭೧ ಸಹಿತ ಕೆಲ ವಾರ್ಡಗಳಲ್ಲಿ ಅಂತಿಮಗೊಳ್ಳಬೇಕಿದೆ.ಈಗಾಗಲೇ ಕೆಪಿಸಿಸಿಗೆ ಅಭ್ಯರ್ಥಿಗಳ ಪಟ್ಟಿ ಕಳುಹಿಸಿದ್ದು, ಇಂದು ಮಧ್ಯಾಹ್ನ ಸ್ವತಃ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರೇ ಪರಿಶೀಲಿಸಿ ಅಂತಿಮಗೊಳಿಸಿ ಪ್ರಕಟಿಸುವರೆನ್ನಲಾಗಿದೆ.
ಸಂಭವನೀಯ ಪಟ್ಟಿ ಇಂತಿದೆ.
೩೫-ಬಸವರಾಜ ಮಾಯಕರ(ಬೆಲ್ಲದ), ೩೭-ಅಭಿಮನ್ಯು ರೆಡ್ಡಿ/ ಗಂಗಾಧರ ದೊಡ್ಡವಾಡ, ೩೯-ರತ್ನಾ ಪಾಟೀಲ, ೪೦-ಶಿವು ರಾಯನಗೌಡರ, ೪೧-ಪ್ರಕಾಶ ಜಾಧವ/ ಬಸವರಾಜ ಕಳಕರಡ್ಡಿ, ೪೨-ರಂಗಪ್ಪ ಬಳ್ಳಾರಿ/ ಚೇತನ ಬಿಜವಾಡ, ೪೩-ಸುನೀಲ ಮಠಪತಿ/ ಸಮೀರ ಖಾನ, ೪೪-ರಾಜೇಶ್ವರಿ ಖಂಡೇಕರ, ೪೫-ಪ್ರಕಾಶ ಕುರಹಟ್ಟಿ, ೪೬-ಪ್ರಭು ಸವದತ್ತಿ, ೪೭-ಮೇಘನಾ ಹಿರೇಮಠ/ ನಿರ್ಮಲಾ ಯಲಿಗಾರ, ೪೮-ಮಾಲತೇಶ ಗುಡೇನಕಟ್ಟಿ/ ದೀಪಕ ಶಿರೋಳ್ಕರ, ೪೯-ರಾಜೇಶ್ವರಿ ಮೆಹರವಾಡೆ, ೫೦-ರಬಿಯಾಬಿ ಯಕ್ಕುಂಡಿ / ಸುಶೀಲಾ ಗುಡಿಹಾಳ, ೫೧-ಸೆಂದಿಲ್‌ಕುಮಾರ, ೫೨-ಚೇತನ ಹಿರೇಕೆರೂರ/ ಪ್ರಕಾಶ ಕ್ಯಾರಕಟ್ಟಿ, ೫೩-ಮದಾರ ಮಕಾಂದರ/ ಆರೀಫ್ ಭದ್ರಾಪುರ, ೫೪-ಶಿವಲೀಲಾ ಹಿರೇಮಠ, ೫೫-ಇಕ್ಬಾಲ್ ನವಲೂರ, ೫೬-ಚಂದ್ರಿಕಾ ಮೇಸ್ತಿç, ೫೭-ಸರಸ್ವತಿ ಕುಲಕರ್ಣಿ, ೫೮-ಶೃತಿ ಚಲವಾದಿ, ೫೯-ಸುವರ್ಣ ಕಲ್ಲಕುಂಟ್ಲಾ
ನಾಲ್ವರು ಹಳಬರಿಗೆ ಟಿಕೆಟ್
ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿ (೫೨), ಮಾಜಿ ಪಾಲಿಕೆ ಸದಸ್ಯರುಗಳಾದ ರತ್ನಾ ಪಾಟೀಲ ( ೩೯), ಸುವರ್ಣ ಕಲಕುಂಟ್ಲಾ(೫೯) ಹಾಗೂ ರಬಿಯಾಬಿ ಯಕ್ಕುಂಡಿ(೫೦) ಇವರಿಗೆ ಮತ್ತೆ ಮಣೆ ಹಾಕಲಾಗಿದೆ.ಅಲ್ಲದೇ ಮಾಜಿ ಮೇಯರ್ ವೆಂಕಟೇಶ ಮೇಸ್ತಿç ಪತ್ನಿ ಚಂದ್ರಿಕಾ ಮೇಸ್ತಿçಗೆ ಸಹ ೫೬ನೇ ವಾರ್ಡಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಕ್ಯಾರಕಟ್ಟಿ ನಾಲ್ಕನೇ ಸಲ ಕಣಕ್ಕಿಳಿಯುತ್ತಿದ್ದಾರೆ.